ಚಿತ್ರದುರ್ಗ:
ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು 2019ರ ರಾಷ್ಟ್ರೀಯ ಶಿಕ್ಷಣ ನೀತಿ ಹೊಂದಿದೆ ಎಂದು ಸಿ.ಟಿ.ಇ ಸಹನಿರ್ದೇಶಕ ಎಂ. ರೇವಣಸಿದ್ದಪ್ಪ ಹೇಳಿದರು.
ನಗರದ ಡಯಟ್ ನಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲಾ ಜಿಲ್ಲೆಗಳಲ್ಲಿ ಶಿಕ್ಷಣ ಅಧಿಕಾರಿಗಳು, ಸಾರ್ವಜನಿಕರು ಚರ್ಚಿಸಿ ಉತ್ತಮಾಂಶಗಳನ್ನು ಕ್ರೂಢೀಕರಣ ಮಾಡಬೇಕು ಎಂದರು. ಎಲ್ಲರೂ ಸಂಘದ ಸದಸ್ಯತ್ವ ಪಡೆದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಯಟ್ ಪ್ರಾಂಶುಪಾಲ ಕೆ.ಕೋದಂಡರಾಮ ಮಾತನಾಡಿ, ಪ್ರಜಾಸತ್ತಾತ್ಮಕ ನಾಯಕತ್ವದಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ನಮ್ಮ ಅಗತ್ಯ ಈಡೇರಿಸಿಕೊಳ್ಳಲು ಸಂಘಟನೆ ಅತಿ ಅವಶ್ಯಕವಾಗಿವೆ. ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಜ್ಞಾನ ವಿಸ್ತರಣೆ ಮಾಡಿಕೊಳ್ಳಲು ಸಂಘಗಳು ಪೂರಕವಾಗುತ್ತವೆ ಎಂದರು.
ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಿ.ಹನುಮಂತರಾಯ ಮಾತನಾಡಿ ರಾಜ್ಯದಲ್ಲಿ 6000 ಕ್ಕೂ ಹೆಚ್ಚು ಶಿಕ್ಷಣಾಧಿಕಾರಿಗಳಿದ್ದು ಜಿಲ್ಲೆಯ 150 ಕ್ಕೂ ಶಿಕ್ಷಣಾಧಿಕಾರಿಗಳಿದ್ದು ಇದುವರೆಗೆ 108 ಜನ ನೋಂದಣಿ ಮಾಡಿಸಿದ್ದಾರೆ. ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ನವೆಂಬರ್ ಮಾಹೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ ಎಂದರು.
ದಾವಣಗೆರೆ ಡಯಟ್ ಪ್ರಾಂಶುಪಾಲ ಹೆಚ್.ಕೆ. ಲಿಂಗರಾಜು 2019ರ ಶಿಕ್ಷಣ ನೀತಿ ಕುರಿತು ಶಿಕ್ಷಣ ನಡೆದು ಬಂದ ದಾರಿ, ಪ್ರಸ್ತುತ ನೀತಿಯ ರೂಪರೇಷೆಗಳ ಕುರಿತು ಉಪನ್ಯಾಸ ನೀಡಿದರು ಸಂಘದ ಕಾರ್ಯದರ್ಶಿ ಡಿ.ವೈ.ಪಿ.ಸಿ ಸಿ.ಎಂ. ತಿಪ್ಪೇಸ್ವಾಮಿ, ಡಯಟ್ ಉಪಪ್ರಾಂಶುಪಾಲ ಎನ್.ಎಂ.ರಮೇಶ್, ಉಪನ್ಯಾಸಕರಾದ ಪಿ. ರಾಜಣ್ಣ, ಆರ್.ನಾಗರಾಜ್, ಎಸ್.ಬಸವರಾಜು, ಮುಖ್ಯ ಶಿಕ್ಷಕರಾದ ರವಿ, ಶಿವಲಿಂಗಪ್ಪ,ಡಿ.ಎಸ್. ಪಾಲಯ್ಯ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








