ಕೊಟ್ಟೂರು
ತಾಲೂಕಿನಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಇದಕ್ಕೆ ಪುಷ್ಯ ಮಳೆ ಕೃಪೆ ಕಾರಣ. ರೋಹಿಣಿ, ಆರಿದ್ರಾ, ಚಿಕ್ಕಪುಷ್ಯ ಮಳೆ ಕೈಕೊಟ್ಟಿದ್ದರಿಂದ ಜೋಳ, ಹೆಸರು, ಎಳ್ಳು, ಅಲ್ಪ ಪ್ರಮಾಣದಲ್ಲಿ ಬಿತ್ತನೆಯಾಗಿದೆ.
ತಾಲೂಕಿನಲ್ಲಿ 23 ಸಾವಿರ ಹೆಕ್ಟೇರ್ ಬಿತ್ತನೆ ಭೂಮಿ ಇದ್ದು, ಶೇ.80 ಬಿತ್ತನೆಯಾಗಿದೆ. ಒಂದು ಕಾಲದಲ್ಲಿ ಹತ್ತಿ ಬೆಳೆಗೆ ಖ್ಯಾತಿ ಹೊಂದಿದ್ದ ಕೊಟ್ಟೂರು ಭಾಗ ಈಗ ಮೆಕ್ಕೆಜೋಳದ ಕಣಜವೆನಿಸಿದೆ.
ಸಂಭೃದ್ದ ಬುತ್ತನೆ 628 ಮಿ.ಮೀ. ಮಳೆಯಾಗಬೇಕು. ಆದರೆ ಪ್ರಸ್ತುತ ಕೇವಲ 320 ಮಿ.ಮೀ. ಮಳೆಯಾಗಿದೆ. ಇನ್ನೂ ಮೂರು ತಿಂಗಳಲ್ಲಿ ಸುರಿಯುವ ಮಳೆ ರೈತರ ಭವಿಷ್ಯ ರೂಪಿಸಲಿದೆ.ಆದರೆ ಕಳೆದ ವರ್ಷ ಮುಂಗಾರು ಜೋರಾಗಿಯೇ ಮಳೆ ಸುರಿಯಿತು. ಇನ್ನೇನು ಬೆಳೆ ಬಂದಿತು ಅನ್ನುವಾಗ ಮಳೆ ಬಾರಲೇ ಇಲ್ಲ. ಈಗ ಮುಂಗಾರುನಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಲಿಲ್ಲ. ಪುಷ್ಯ ಮಳೆಯಿಂದಾಗಿ ಬಿತ್ತನೆ ಕಾರ್ಯ ಜೋರಾಗಿದೆ.
ಇದರಿಂದಾಗಿ ಖಾಸಗಿ ರಸಗೊಬ್ಬರದ ಅಂಗಡಿ ಹೊರತು ಪಡಿಸಿ, ಸ್ಥಳಿಯ ರೈತ ಸಂಪರ್ಕ ಕೇಂದ್ರದಲ್ಲಿ 420 ಕ್ವಿಂಟಾಲ್ ಮೆಕ್ಕೆಜೋಳ,35 ಕ್ವಿಂಟಾಲ್ ಸಜ್ಜೆ,38 ಕ್ವಿಂಟಾಲ್ ತೊಗರಿ, 2 ಕ್ವಿಂಟಾಲ್ ಸೂರ್ಯಕಾಂತಿ, 30 ಕ್ವಿಂಟಾಲ್ ರಾಗಿ, ಒಂದೂವರೆ ಕ್ವಿಂಟಾಲ್ ನವಣೆಯನ್ನು ರೈತರು ರಿಯಾಯಿತಿ ಬೆಲೆಗೆ ಖರೀದಿಸಿದ್ದಾರೆ.ಮೆಕ್ಕೆಜೋಳ ರೈತರಿಗೆ ಸುಲಭದ ಬೆಳೆ, ಇದೇ ರೀತಿ ತೋಗರಿ ಅಂತರ ಬೆಳೆಯಾಗಿರುವುದರಿಂದ ರೈತರು ಹೆಚ್ಚು ಅವಲಂಭಿತರಾಗಿದ್ದಾರೆ.
ಮೊದಲಿನಂತೆ ರಸಗೊಬ್ಬರದ ಅಭಾವವಿಲ್ಲ. ಕಾರಣ ರಸಗೊಬ್ಬರ ಖರೀದಿಸುವ ರೈತನ ಆಧಾರ ಕಾರ್ಡ ನಮೂದಿಸುತ್ತಾರೆ. ಇದರಿಂದ ರಸಗೊಬ್ಬರ ಕಂಪನಿಗೆ ನೇರವಾಗಿ ಸಬ್ಸಿಡಿ ಹಣ ಸಂದಾಯವಾಗುತ್ತದೆ. ಮೇಲಾಗಿ ರಸಗೊಬ್ಬರವನ್ನು ಸ್ಟಾಕ್ ಮಾಡಲು ಬರುವುದಿಲ್ಲ. ಆದ್ದರಿಂದ ರಸಗೊಬ್ಬರ ಸಮಸ್ಯೆ ಮೊದಲಿನಷ್ಟು ಇಲ್ಲ.
wwwwwwwwwwwwwwww
ಸರ್ಕಾರ ಹಂಗಾಮಿನ ರಾಷ್ಟ್ರೀಯ ವಿಕಾಶ ಯೋಜನೆ ಅಡಿಯಲ್ಲಿ ಸಿರಿ ಧಾನ್ಯಗಳಾದ ನವಣೆ, ಊದಲು, ಹರಕ, ಕೊರಲೆ, ಸಾವೆ, ಬರಗು ಬೆಳೆಯು ರೈತನಿಗೆ ಹೆಕ್ಟೆರ್‍ಗೆ 10 ಸಾವಿರ ರು. ಪ್ರೋತ್ಸಾಹ ಹಣ ನೀಡಲಿದೆ ಕೊಟ್ಟೂರು ತಾಲೂಕಿನಲ್ಲಿ ಸಿರಿ ಧಾನ್ಯದಲ್ಲಿ ನವಣೆ ಬೆಳೆಯುತ್ತಿದ್ದು , ಉಳಿದ ಸಿರಿ ಧಾನ್ಯಗಳ ಬೆಳೆಗೆ ಈ ಪ್ರದೇಶ ಸೂಕ್ತವಾಗಿಲ್ಲ ಎಂಬುದು ಕೃಷಿ ತಜ್ಞರ ಅಭಿಮತ.ಕಳೆದ ಮೂರು ವರ್ಷಗಳ ಮಳೆ ಆಭಾವದಿಂದ ಕಂಗಾಲಾಗಿರುವು ರೈತನಿಗೆ ಮುಂದಿನ ಮಳೆಗಳು ಕೃಪೆ ತೋರಬೇಕಿದೆ.