ಹೂವಿನಹಡಗಲಿ
ತಾಲೂಕಿನ ಹಿರೇಹಡಗಲಿ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಪ್ರಭಾರಿ ವಸತಿ ನಿಲಯ ಪಾಲಕರ ನಿರ್ಲಕ್ಷ್ಯದಿಂದಾಗಿ ಸಂಪೂರ್ಣವಾಗಿ ಅವ್ಯಸ್ಥೆಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಸರ್ಕಾರ ವಸತಿ ನಿಲಯಗಳನ್ನು ತೆರೆದಿದ್ದು, ಆದರೆ ಇಂತಹ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಮತ್ತು ಸೌಲಭ್ಯದ ಕೊರೆತೆಗಳು ಕಾಣುತ್ತಿವೆ ಎಂದು ಆಕ್ರೋಶ ವ್ಯಕ್ತ ಪಡಿದ್ದಾರೆ.
ನಂದಿಹಳ್ಳಿ ವಸತಿ ನಿಲಯ ಪಾಲಕ ಜಂಕಣ್ಣ ಎಂಬುವವರು ಹಿರೇಹಡಗಲಿ ವಸತಿ ನಿಲಯದ ಪ್ರಭಾರಿ ನಿಲಯ ಪಾಲಕರಾಗಿದ್ದಾರೆ. ಆದರೆ ಸದರಿ ವಸತಿ ನಿಲಯಕ್ಕೆ ಯಾವಗಲೋ ಒಮ್ಮೆ ಬಂದು ಹೋಗುವುದರಿಂದ ಇಲ್ಲಿ ನಾಗಪ್ಪ ಎನ್ನುವ ಮುಖ್ಯ ಅಡುಗೆದಾರನೇ ವಸತಿ ನಿಲಯ ಪಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಮತ್ತು ಉಪಹಾರ ಸಿಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಿರೇಹಡಗಲಿ ವಸತಿ ನಿಲಯಕ್ಕೆ ಭೇಟಿ ನೀಡಿ ಖಾಯಂ ವಾರ್ಡನ್ ನೇಮಿಸಿ ಇಲ್ಲಿನ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.