ಶಿರಾ:
ಸ್ವಾದೀನ ಪಡಿಸಿ ರೈತರ ಭೂಮಿಗೆ ಪರಿಹಾರ ನೀಡದೆ, ರಸ್ತೆ ಅಗಲೀಕರಣ ಆಭಿವೃದ್ಧಿ ಕಾಮಗಾರಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆಯ ಕ್ರಮವನ್ನು ಖಂಡಿಸಿ ಜಮೀನು ಕಳೆದುಕೊಂಡ ರೈತರು ಹಾಗೂ ರೈತ ಸಂಘ ಒಗ್ಗೂಡಿ ರಸ್ತೆ ತಡೆ ನಡೆಸುವ ಮೂಲಕ ನಾದೂರು ಗ್ರಾಮದ ಗೇಟ್‍ನಲ್ಲಿ ಪ್ರತಿಭಟನೆ ನಡೆಸಿದರು.
ಶಿರಾ ತಾಲೂಕಿನ ನಾದೂರು ಗ್ರಾಮದ ಗೇಟ್‍ನಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ನಡೆಸುತ್ತಿರುವ ರೈತರ ಮೇಲಿನ ಕ್ರಮವನ್ನು ಕಂಡಿಸಿ ಬುಧವಾರ ಮಧ್ಯಾನ್ಹ ಒಂದು ಗಂಟೆಯವರೆಗೂ ಪ್ರತಿಭಟನಾಕಾರರು ಬಸ್ಸು ಸೇರಿದಂತೆ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ತಾಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ನಾದೂರು ಕೆಂಚಪ್ಪ ಉದ್ದರಾಮನಹಳ್ಳಿ ಕ್ರಾಸ್ ನಿಂದ ಪಟ್ಟನಾಯಕನಹಳ್ಳಿ ವರೆಗೆ ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆ 50, 54ರ ಯೋಜನೆ ಯಡಿ 4.ಕಿಮೀ ರಸ್ತೆ ಆಭಿವೃದ್ಧಿಗೆ 8.ಕೋಟಿ ರೂಪಾಯಿ ಹಣ ಮಂಜೂರಾಗಿದೆ. ಅದರೆ ಸರ್ಕಾರಿ ಸರ್ವೆ ದಾಖಲೆಗಳ ಪ್ರಕಾರ ಈ ರಸ್ತೆ 20 ಅಡಿ ರಸ್ತೆ ಆಗಿದ್ದು ಅವತ್ತು ಸಹ ಭೂಸ್ವಾದೀನ ಪರಿಹಾರ ರೈತರಿಗೆ ನೀಡಿಲ್ಲ. ಇದೀಗ ರಸ್ತೆ 60 ಅಡಿ ಅಗಲವಾಗುತ್ತಿದ್ದು ರಸ್ತೆ ಅಕ್ಕ ಪಕ್ಕದ ಬಡ ರೈತರು ಭೂಮಿ ಕಳೆದು ಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಇರುವಂತ ಅಲ್ಪ ಸ್ವಲ್ಪ ಭೂಮಿ ರಸ್ತೆ ನೆಪದಲ್ಲಿ ಕಬಳಿಸಿ ಕೊಂಡು ಅನ್ನಧಾತನಿಗೆ ಒಕ್ಕಲೆಬ್ಬಿಸುವಂತ ಸರ್ಕಾರದ ಧೋರಣೆ ಖಂಡನೀಯ ಎಂದರು.
ಭೂಸ್ವಾದೀನ ಮತ್ತು ಪುರ್ನನಿರ್ಮಾಣ ಕಾಯ್ದೆ. 2013 ಪ್ರಕಾರ ಲೋಕೋಪಯೋಗಿ ಇಲಾಖೆ ನಡೆದು ಕೊಂಡು ರೈತನಿಗೆ ಸೊಕ್ತ ಪರಿಹಾರ ನೀಡ ಬೇಕೆಂದು ಒತ್ತಾಯ ಪಡಿಸಿದ ರೈತರು ನಾವು ಆಭಿವೃದ್ಧಿಗೆ ಅಡ್ಡಿ ಪಡಿಸುತ್ತಿಲ್ಲ, ರೈತರಿಗೆ ನ್ಯಾಯಯುತ ಪರಿಹಾರ ನೀಡಿ ಎಂಬುದು ನಮ್ಮ ಬೇಡಿಕೆಯಾಗಿದ್ದು ಇತ್ಯಾರ್ಥವಾಗುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಅಗ್ರಹಿಸಿದರು. ನಿರ್ಲಕ್ಷ ವಹಿಸಿ ಕಾಮಗಾರಿ ಆರಂಭಿಸಿರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ರೈತ ಸಂಘದ ಅಧ್ಯಕ್ಷ ಲಕ್ಷ್ಮಣಗೌಡ, ಉಪಾಧ್ಯಕ್ಷ ವೀರಗ್ಯಾತಪ್ಪ, ನಿವೃತ್ತ ಆಭಿಯಂತರ ಜಯರಾಮಯ್ಯ, ರೈತ ಮುಖಂಡರಾದ ಮುಕುಂದಪ್ಪ, ಪರಸಣ್ಣ, ಜಗದೀಶ್, ಉಮೇಶ್, ರಾಮಣ್ಣ, ಜುಂಜಣ್ಣ, ಮುಖಂಡರಾದ ದಾಸಪ್ಪ, ನಾಗರಾಜು, ಲಕ್ಷ್ಮೀನರಸಿಂಹಯ್ಯ, ಗ್ರಾಪಂ ಮಾಜಿ ಸದಸ್ಯ ವೇಣು, ಕಂಬಣ್ಣ, ಚಿಕ್ಕಣ್ಣ, ಮಹಲಿಂಗಪ್ಪ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು, ಡಿವೈಎಸ್ಪಿ ವೆಂಕಟಸ್ವಾಮಿ ಸೊಕ್ತ ಪೋಲಿಸ್ ಭದ್ರತೆ ಕಲ್ಪಿಸಿದ್ದರು.