ಬಿಜೆಪಿಯು ಚುನಾವಣಾ ಗಿಮಿಕ್ ಆಗಿ ಭರವಸೆಗಳ ಮಹಾಪೂರ ಹರಿಸಿದೆ : ಎಸ್‍ಪಿಎಂ

ಕೊರಟಗೆರೆ

        ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್ ಕ್ಷೇತ್ರದ ಮತದಾರರಿಗೆ ನೀಡಿದ ಭರವಸೆಗಳಂತೆ ಜನ ನಿರೀಕ್ಷೆಗೂ ಮೀರಿ ಅನುದಾನ ಕ್ಷೇತ್ರಕ್ಕೆ ಹರಿದು ಬರುತ್ತಿದೆ. ಮತದಾರರು ನೀಡಿದ ಆಶಿರ್ವಾದದ  ತೀರಿಸಲು ಮುಂದಿನ ದಿನಗಳಲ್ಲಿ ಕೊರಟಗೆರೆ ವಿಧಾನಸಭಾ ವ್ಯಾಪ್ತಿಗೆ ಅಭಿವೃದ್ದಿ ಮಹಾಪೂರವೇ ಹರಿಯಲಿದೆ ಎಂದು ತುಮಕೂರು ಸಂಸದ ಮುದ್ದ ಹನುಮೆಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು.

         .ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹಾಗೂ ಜೆಟ್ಟಿ ಅಗ್ರಹಾರದ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಸಿಸಿರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿದ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಾ ಜನರ ಆಶೀರ್ವಾದದಿಂದ ರಾಜ್ಯದ ಡಿಸಿಎಂ ಹುದ್ದೆಗೆ ಏರಲು ಸಹಕಾರಿಯಾದ ಮತದಾರರ ಋಣ ತೀರಿಸುವ ಕೆಲಸಕ್ಕೆ ಪರಮೇಶ್ವರ್ ಹೆಚ್ಚು ಆಸಕ್ತಿ ತಾಳಿ, ಕೋಟ್ಯಂತರ ರೂ. ಅನುದಾನ ಬಿಡುಗಡೆಗೊಳಿಸುವಲ್ಲಿ ಶ್ರಮ ಪಡುತ್ತಿದ್ದಾರೆ ಎಂದರು.

          ತಾಲ್ಲೂಕಿನ ಜೆಟ್ಟಿಅಗ್ರಹಾರಕ್ಕೆ 10ಲಕ್ಷ, ಬರಕ ಗ್ರಾಮಕ್ಕೆ 42ಲಕ್ಷ, ಕುರಿಹಳ್ಳಿ ಗ್ರಾಮಕ್ಕೆ 15ಲಕ್ಷ, ತೋವಿನಕೆರೆಗೆ 70ಲಕ್ಷ, ಜೋನಿಗರಹಳ್ಳಿಗೆ 7ಲಕ್ಷ, ಮರೆನಾಯಕನಹಳ್ಳಿಗೆ 6ಲಕ್ಷ, ಚನ್ನರಾಯನ ದುರ್ಗಕ್ಕೆ 6ಲಕ್ಷ, ಚೋಳರ ಪಾಳ್ಯ ಗ್ರಾಮಕ್ಕೆ 50ಲಕ್ಷ, ಮುಗ್ಗೊಂಡನಹಳ್ಳಿಕ್ಕೆ 10ಲಕ್ಷ, ಕಾಮೇನಹಳ್ಳಿ ಗ್ರಾಮಕ್ಕೆ 6ಲಕ್ಷ ಸೇರಿ ಎಸ್‍ಸಿಪಿ ಮತ್ತು ಟಿಎಸ್‍ಪಿ ಯೋಜನೆಯಡಿ ಸಿಸಿರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ 2ಕೋಟಿ 22ಲಕ್ಷ ಅನುದಾನ ಬಿಡುಗಡೆಗೊಂಡಿದೆ ಎಂದರು.

          ತುಮಕೂರು ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆಯಾದ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಕೇಂದ್ರ ಸರಕಾರದಿಂದ ರೈಲ್ವೆ ಕಾಮಗಾರಿಗೆ ಈಗಾಗಲೇ 239 ಕೋಟಿ ಅನುದಾನ ಬಿಡುಗಡೆ ಆಗಿದೆ. ಜಿಲ್ಲೆಯ ರೈಲ್ವೆ ಕಾಮಗಾರಿಯು ತ್ವರಿತವಾಗಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಕೊರಟಗೆರೆ ಕ್ಷೇತ್ರದಲ್ಲಿಯೂ ಸಹ ರೈಲ್ವೆ ನಿಲ್ದಾಣದ ಕಾಮಗಾರಿ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

          ಕೆಶಿಪ್‍ನಿಂದ ಜರುಗಿದ ರಾಜ್ಯ ಹೆದ್ದಾರಿ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಕೊರಟಗೆರೆ ಪಟ್ಟಣದ ಹೊರವಲಯದಲ್ಲಿ ಹಾದು ಹೋಗಿರುವ ಬೈಪಾಸ್ ಕಾಮಗಾರಿ ಅವೈಜ್ಞಾನಿಕವಾಗಿದೆ. ರಸ್ತೆ ತಿರುವು ಹಾಗೂ ಅಡ್ಡರಸ್ತೆಗಳಲ್ಲಿ ಹಲವು ಅಪಘಾತಗಳು ಜರುಗಿವೆ. ನೂರಾರು ಜನ ಸಾವು ನೋವಿನಿಂದ ಬಳಲಿದ್ದಾರೆ. ಕಾರಣ ಅಂತಹ ಸ್ಥಳಗಳಲ್ಲಿ ಹೈಮಾಸ್ಟ್ ದೀಪ ಮತ್ತು ವೈಜ್ಞಾನಿಕ ರಸ್ತೆ ಉಬ್ಬು ನಿರ್ಮಿಸಲು ಕೆಶಿಪ್ ಅಧಿಕಾರಿಗಳಿಗೆ ಡಿಸಿಎಂ ಕಚೇರಿಯಲ್ಲಿ ಇತ್ತೀಚೆಗೆ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಶಿಪ್ ಅಧಿಕಾರಿಗಳು ಈಗಾಗಲೇ 6 ಕಡೆ ಹೈಮಾಸ್ಟ್ ದೀಪ ಮತ್ತು ರಸ್ತೆ ಉಬ್ಬಿನ ಕಾಮಗಾರಿ ಪ್ರಾರಂಭಿಸಿದ್ದು, ತ್ವರಿತವಾಗಿ ಸುಗಮ ಸಂಚಾರಕ್ಕೆ ಚಾಲನೆ ನೀಡುತ್ತೇವೆ ಎಂದರು.

          ಜಿಪಂ ಸದಸ್ಯೆ ಅಕ್ಕಮಹಾದೇವಿ, ತಾಪಂ ಉಪಾಧ್ಯಕ್ಷೆ ನರಸಮ್ಮ, ಪಪಂ ಸದಸ್ಯ ಬಲರಾಮಯ್ಯ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆಶಂಕರ್ ಗ್ರಾಪಂ ಅಧ್ಯಕ್ಷ ನಂದೀಶ್, ಉಪಾಧ್ಯಕ್ಷೆ ಲಲಿತಮ್ಮ, ಸದಸ್ಯರಾದ ಸಂಜೀವರಾಯಪ್ಪ, ಸುನಿತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಮುಖಂಡರಾದ ನರಸಿಂಹರಾಜು, ಪುಷ್ಪರಾಜಶೇಖರ್, ವಿಜಯಕುಮಾರ್, ಪಿಡ್ಲ್ಯೂಡಿ ಎಇಇ ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link