ವಿಶ್ವಸಂಸ್ಥೆ
ಇರಾನ್ ಪರಮಾಣು ಕಾರ್ಯಕ್ರಮ ವಿಸ್ತರಣೆ ತಡೆಗೆ ಪ್ರತಿತಂತ್ರ ಸೇರಿದಂತೆ ಜಾಗತಿಕ ಮಹತ್ವದ ಹಲವು ವಿಷಯಗಳ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೋ ಹಾಗೂ ನೂತನವಾಗಿ ನೇಮಕವಾಗಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಗನ್ ಒರ್ಟಗಸ್ ಈ ಬಗ್ಗೆ ಗುರುವಾರ ಹೇಳಿಕೆ ನೀಡಿ, ಉಭಯ ನಾಯಕರು ನ್ಯಾಟೋ ಮೈತ್ರಿ ಬಲವರ್ಧನೆ ಸೇರಿದಂತೆ ಅನೇಕ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಅಮೆರಿಕವನ್ನು ಜಂಟಿ ಸಮಗ್ರ ಕಾರ್ಯತಂತ್ರ ಪಡೆಯಿಂದ (ಜೆಸಿಪಿಒಎ) ಹಿಂಪಡೆದ ನಂತರ ಅಮೆರಿಕ – ಇರಾನ್ ನಡುವಿನ ಬಾಂಧವ್ಯ ಕ್ಷೀಣಿಸಿದೆ. ಇರಾನ್ ತೈಲ ಮಾರಾಟವನ್ನು ಶೂನ್ಯಕ್ಕಿಳಿಸಿ ಆರ್ಥಿಕತೆಯ ಪ್ರಮುಖ ವಲಯಗಳ ಮೇಲೆ ಪುನಃ ನಿರ್ಬಂಧ ಹೇರುವುದಾಗಿ ಅಮೆರಿಕ ಘೋಷಿಸಿತ್ತು. ಮೇ ತಿಂಗಳಲ್ಲಿ ಇರಾನ್ ಜೆಸಿಪಿಒಎ ಅಡಿ ಕೆಲವು ನಿಯಮಾವಳಿಗಳನ್ನು ರದ್ದುಪಡಿಸಿ ಇರನ್ ನೊಂದಿಗೆ ತೈಲ ವ್ಯಾಪಾರಕ್ಕೆ ಇತರೆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.
ಗಡುವು ಮುಗಿದ ಹಿನ್ನೆಲೆಯಲ್ಲಿ ಇರಾನ್ ಯುರೇನಿಯಂ ಅನ್ನು ಜೆಸಿಪಿಒಎ ಒಪ್ಪಂದದಡಿ ಸೂಚಿತ ಶೇ3.67 ಮಟ್ಟಕ್ಕಿಂತ ಹೆಚ್ಚಾಗಿ ತೆಗೆಯಲು ಆರಂಭಿಸಿತ್ತು.








