ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಲಾರಿ.!!

ಚೇಳೂರು

    ಚಾಲಕನ ನಿಯಂತ್ರಣತಪ್ಪಿ ಸುಮಾರು 25 ಸಾವಿರ ಲೀಟರ್‍ನಷ್ಟು ಆಯಿಲ್‍ನ್ನು ತುಂಬಿಕೊಂಡು ಹೋಗುತ್ತಿದ ಟ್ಯಾಂಕರ್  ಉರುಳಿ ಬೆಂಕಿಗೆ ಆಹುತಿಯಾಗಿರುವ ಘಟನೆ ವರದಿಯಾಗಿದೆ. 

    ಚೇಳೂರು ಕಡೆಯಿಂದ ನಿಟ್ಟೂರು ಮಾರ್ಗವಾಗಿ ಮೈಸೂರು ಕಡೆ ಬರುತ್ತಿದ್ದ ಆಯಿಲ್ ತುಂಬಿದ ಲಾರಿ ಶನಿವಾರ 5 ಗಂಟೆ ಸಮಯದಲ್ಲಿ ಚಾಲಕನ ನಿರ್ಲಕ್ಷ್ಯ ದಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಮುರಿದು ಲಾರಿಯ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲಿಯೆ ಲಾರಿ ಧಗ ಧಗಿಸಿ ಹೊತ್ತಿ ಉರಿದಿದೆ.

    ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರೂ ಕೂಡ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಲಾರಿಯ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದು, ಆತನಿಗೆ ಸಣ್ಣ ಪುಟ್ಟ ಗಾಯಗಳು ಆಗಿರುವುದರಿಂದ ಗುಬ್ಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಡಿವೈಎಸ್ ಪಿ ವೆಂಕಟಸ್ವಾಮಿ, ಚೇಳೂರು ಪಿಎಸ್ ಐ ಲಕ್ಷ್ಮೀಕಾಂತ್ ಭೇಟಿ ನೀಡಿದ್ದರು. ಚೇಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link