ಇಸ್ಲಾಮಾಬಾದ್:
ಜಾಗತಿಕ ಮಟ್ಟದಲ್ಲಿ ತೀವ್ರ ಆರ್ಥಿಕವಾಗಿ ಕಪ್ಪು ಪಟ್ಟಿಗೆ ನೂಕಲ್ಪಟ್ಟಿರುವುದರಿಂದ ಪಾಕಿಸ್ತಾನಕ್ಕೆ ಆರ್ಥಿಕ ಸಹಾಯ ಮಾಡಲು ಯಾರು ಮುಂದೆ ಬರುತ್ತಿಲ್ಲ ಮತ್ತು ವ್ಯಾಪಾರ ಮಾಡಲು ಸಂಗ್ರಹವು ಇಲ್ಲದಂತಾಗಿದೆ ಇಂತಹ ಪರಿಸ್ಥಿತಿಯಲ್ಲು ಪಾಕಿಸ್ತಾನ ಹೊಸ ರಪ್ತು ವ್ಯವಹಾರವನ್ನು ಶುರು ಮಾಡಿದೆ.
ಪಾಕಿಸ್ತಾನ ತನ್ನ ಮಿತ್ರದೇಶ ಚೀನಾಗೆ ಪಾಕಿಸ್ತಾನ ಕತ್ತೆ ರಫ್ತು ಮಾಡಿ ತೀವ್ರ ಅಪಹಾಸ್ಯಕ್ಕೀಡಾಗಿತ್ತು ಇದೀಗ ಕತ್ತೆ ಜೊತೆಗೆ ಬೀದಿ ನಾಯಿಗಳನ್ನು ಚೀನಾ ಮತ್ತು ಫಿಲಿಪೈನ್ಸ್ ಗಳಿಗೆ ರಫ್ತು ಮಾಡಲು ನಿರ್ಧರಿಸಿದೆ. ಈ ಮಧ್ಯೆ ಸರ್ಕಾರಿ ಸಭೆಗಳಲ್ಲಿ ಕಾಫಿ, ಬಿಸ್ಕೆಟ್ ಮತ್ತು ತಿಂಡಿಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕತ್ತೆ ಅಭಿವೃದ್ಧಿ ಯೋಜನೆಗೆ 1 ಬಿಲಿಯನ್ ಡಾಲರ್ ಹೂಡಿಕೆ ಹರಿದು ಬಂದಿದ್ದು, ತನ್ನ ಖೈಬರ್-ಪಖ್ತೂನ್ಖ್ವಾದ ಪ್ರಾಂತ್ಯದಲ್ಲಿ ಚೀನಾದ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನ ಯೋಜನೆ ರೂಪಿಸಿದ್ದು, ಇದರ ಭಾಗವಾಗಿ ಕತ್ತೆಗಳನ್ನು ಚೀನಾಗೆ ರಫ್ತು ಮಾಡಲಿದೆ ಎಂದು ತಿಳಿದುಬಂದಿದೆ. ಪಾಕಿಸ್ತಾನದ ಈ ಪ್ರಾಂತ್ಯದ ಕತ್ತೆಗಳಿಗೆ ಚೀನಾದಲ್ಲಿ ಅತ್ಯಂತ ಹೆಚ್ಚಿನ ಬೆಲೆ ಇದ್ದು, ಈ ಪ್ರಾಂತ್ಯದಲ್ಲಿರುವ ಕತ್ತೆಗಳ ಚರ್ಮದಿಂದ ಔಷಧಗಳನ್ನು ತಯಾರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಚೀನಾಗೆ ಕತ್ತೆಗಳನ್ನು ರಫ್ತು ಮಾಡಲು ಪಾಕಿಸ್ತಾನ ತೀರ್ಮಾನಿಸಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








