ಬೆಂಗಳೂರು
ವಿಧಾನಸಭೆ 43 ಮಂದಿ ಹಾಗೂ ವಿಧಾನ ಪರಿಷತ್ 21 ಮಂದಿ ಸದಸ್ಯರು ಈವರೆವಿಗೂ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಇನ್ನು ಸಲ್ಲಿಸಿಲ್ಲ. ಲೋಕಾಯುಕ್ತ ಕಾಯ್ದೆಗೆ 22ರ ಪ್ರಕಾರ ಪ್ರತಿಶಾಸಕರು ಮತ್ತು ಅವರ ಕುಟುಂಬ ಸದಸ್ಯರು ಆಸ್ತಿ ವಿವರಗಳನ್ನು ಜೂನ್ 30 ಒಳಗೆ ಸಲ್ಲಿಸಬೇಕು. ಆದರೆ ಇಷ್ಟು ಮಂದಿ ಶಾಸಕರು ಇನ್ನು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಆಸ್ತಿ ವಿವರಗಳನ್ನು ಸಲ್ಲಿಸುವ ಕಾಲಾವಧಿ ಎರಡು ತಿಂಗಳು ಕಳೆದಿದೆ.
ಆದರೂ ಈವರೆವಿಗೂ 43 ಮಂದಿ ವಿಧಾನ ಸಬಾ ಸದಸ್ಯರು ಹಾಗೂ 71 ಮಂದಿ ವಿಧಾನ ಪರಿಷತ್ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಿಲ್ಲ. ಲೋಕಾಯುಕ್ತ ಕಾಯ್ದೆ 22ರ ಪ್ರಕಾರ ನಿಗದಿತ ಅವಧಿಗೆ ಆಸ್ತಿ ವಿವರ ಸಲ್ಲಿಸಿದ ಶಾಸಕರಿಗೆ ನೋಟೀಸ್ ಜಾರಿ ಗೊಳಿಸಿದ ಎರಡು ತಿಂಗಳೊಳಗಾಗಿ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಕೆ ಮಾಡಬೇಕು.
ಆಗ ಈ ವಿವರಗಳನ್ನು ಸಲ್ಲಿಸದೆ ಇದ್ದ ಶಾಸಕರ ಹೆಸರನ್ನು ದಿನ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಆಗಸ್ಟ್ 31ರ ಬಳಿಕವು ಸಲ್ಲಿಸದಿದ್ದರೆ ಲೋಕಾಯುಕ್ತ ಸಂಸ್ಥೆಯೂ ರಾಜ್ಯ ಪಾಲರಿಗೆ ಆಸ್ತಿ ವಿವರ ಸಲ್ಲಿಸಿದ ಸದಸ್ಯರ ಪಟ್ಟಿಯನ್ನು ಕಳುಹಿಸಿಕೊಟ್ಟು ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








