ಯಮನ್ :
ಸೌದಿ ಅರೇಬಿಯಾ ನೇತೃತ್ವದ ಸೇನಾ ಪಡೆಗಳು ಕಳೆದ ರಾತ್ರಿ ಯೆಮನ್ ಕೇಂದ್ರ ಪ್ರಾಂತ್ಯದ ಜೈಲಿನ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 50 ಯುದ್ಧ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
‘ಜೈಲಿನ ಮೇಲೆ ಮೈತ್ರಿಕೂಟದ ಯುದ್ಧ ವಿಮಾನಗಳು ದಾಳಿ ನಡೆಸಿದ್ದು, ದಾಳಿಯಲ್ಲಿ ಸುಮಾರು 50 ಜನ ಸಾವನ್ನಪ್ಪಿರಬಹುದು ಮತ್ತು 00 ಮಂದಿ ಗಾಯಗೊಂಡಿರ ಬಹುದು ಎಂದು ಸಚಿವಾಲಯ ತಿಳಿಸಿದೆ .ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ಅವಶೇಷಗಳಡಿಯಲ್ಲಿ ಹುಡುಕಾಟ ನಡೆಸುತ್ತಿದೆ.ಅನೇಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
‘ಸುಮಾರು 170 ಮಂದಿಯನ್ನು ಸರ್ಕಾರಿ ಪಡೆಗಳೊಡನೆ ಘರ್ಷಣೆ ನಡೆಯುವಾಗ ಸೆರೆಹಿಡಿಯಲ್ಪಟ್ಟಿದದ್ದರು ಅವರನ್ನು ಇದೇ ಜೈಲಿನಲ್ಲಿ ತಿಂಗಳುಗಟ್ಟಲೆಯಿಂದ ಬಂಧಿಸಲಾಗಿದೆ. ಈ ಕೈದಿಗಳು ವಿನಿಮಯ ಒಪ್ಪಂದದಂತೆ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುವವರಿದ್ದರು.’ ಎಂದು ಯಮನ್ ಸುದ್ದಿ ವಾಹಿನಿಯೊಂದು ವರದಿ ಮಾಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








