ಟ್ರಾಫಿಕ್ ನಿಯಮ ಉಲ್ಲಂಘನೆ: ಒಂದೇ ದಿನ 60,000 ರೂ. ಸಂಗ್ರಹ

ತುಮಕೂರು
    ಟ್ರಾಫಿಕ್ ನಿಯಮಾವಳಿಗಳ ಉಲ್ಲಂಘನೆಗೆ ಹೊಸ ರೀತಿಯ ದಂಡವನ್ನು ವಿಧಿಸಿ ಸರ್ಕಾರವು ಸುತ್ತೋಲೆ ಹೊರಡಿಸಿದ ಬಳಿಕ, ತುಮಕೂರು ನಗರದಲ್ಲಿ ಸೆ.8 ರಿಂದ ಅದರ ಅನುಷ್ಠಾನ ಆರಂಭವಾಗಿದೆ. ನಗರದಲ್ಲಿ ಟ್ರಾಫಿಕ್ ಪೊಲೀಸರು ಸೆ.8 ರಂದು ಒಂದೇ ದಿನ 82 ಪ್ರಕರಣಗಳನ್ನು ದಾಖಲಿಸಿ, ಒಟ್ಟು 60,000 ರೂ. ದಂಡವನ್ನು ಸಂಗ್ರಹಿಸಿದ್ದಾರೆ.
    ತುಮಕೂರು ನಗರದಲ್ಲಿ ಟ್ರಾಫಿಕ್ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 58 ಪ್ರಕರಣಗಳನ್ನು ದಾಖಲಿಸಿದ್ದು, 45,500 ರೂ. ದಂಡವನ್ನು ಸಂಗ್ರಹಿಸಲಾಗಿದೆ. ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ಪ್ರಕರಣಗಳನ್ನು ದಾಖಲಿಸಿ, ಒಟ್ಟು 14,500 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ ಎಂದು ಮೂಲಗಳು “ಪ್ರಜಾಪ್ರಗತಿ”ಗೆ ತಿಳಿಸಿವೆ.
    ಟ್ರಾಫಿಕ್ ಪೊಲೀಸರು ಬ್ಲಾಕ್‍ಬೆರಿ ಉಪಕರಣವನ್ನು ಬಳಸಿಕೊಂಡು ದಂಡವನ್ನು ವಿಧಿಸುತ್ತಿದ್ದಾರೆ. ಆಯಾ ಅಪರಾ`Àಕ್ಕೆ ಇಂತಿಷ್ಟು ದಂಡವೆಂಬುದು ಅದರಲ್ಲಿ ಅಡಕವಾಗಿದ್ದು, ತಕ್ಷಣವೇ ಅದರಲ್ಲಿ ಪ್ರದರ್ಶನಗೊಳ್ಳುತ್ತದೆ. ಬಳಿಕ ಅದರ ಪ್ರತಿಯನ್ನು ಹೊರತೆಗೆಯಬಹುದು. ಅದನ್ನು ಸಂಬಂಧಿಸಿದ ವ್ಯಕ್ತಿಗೆ ನೀಡಲಿದ್ದು, ಅವರು ಸ್ಥಳದಲ್ಲೇ ದಂಡವನ್ನು ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ಸದರಿ ವಾಹನವನ್ನು ಪೊಲೀಸರು ವಶಪಡಿಸಿಕೊಳ್ಳಲಿದ್ದು, ಬಳಿಕ ಪೊಲೀಸ್ ಠಾಣೆಗೆ ಬಂದು ಅಥವಾ ನ್ಯಾಯಾಲಯಕ್ಕೆ ತೆರಳಿ ದಂಡವನ್ನು ಪಾವತಿಸಿ ಬಳಿಕ ವಾಹನವನ್ನು ಹಿಂಪಡೆಯಲು ಅವಕಾಶವಿರುತ್ತದೆ.
     ಇದಲ್ಲದೆ ಟ್ರಾಫಿಕ್ ಪೊಲೀಸರು ಸದರಿ ಬ್ಲಾಕ್‍ಬೆರಿ ಉಪಕರಣದ ಮೂಲಕ ಸ್ಥಳದಲ್ಲೇ ನೋಟೀಸ್‍ನ್ನು ಸಹ ಜಾರಿ ಮಾಡಬಹುದಾಗಿದೆ. ಈಗ ಅತಿ ಕಡಿಮೆ (ಮಿನಿಮಂ) ದಂಡವೆಂದರೂ, 1,000 ರೂ. ಆಗಲಿದೆ. ಹೀಗಾಗಿ ವಾಹನಗಳ ಚಾಲಕರು ಮತ್ತು ಸವಾರರು ವಾಹನ ಚಾಲನೆಗೆ ಮುನ್ನ ಎಲ್ಲ ಅಗತ್ಯ ದಾಖಲಾತಿಗಳೊಂದಿಗೆ ಸಜ್ಜಾಗಿರಬೇಕಾಗುತ್ತದೆ. 
    ಟ್ರಾಫಿಕ್ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಅವರು ತಮ್ಮ ಅಂಗಿಯ ಜೇಬಿನ ಬಳಿ “ಬಾಡಿ ಕ್ಯಾಮೆರಾ” ಧರಿಸಿರುತ್ತಾರೆ. ಇದರಲ್ಲಿ ಸುಮಾರು 8 ಗಂಟೆಗಳ ಕಾಲ ವಿಡಿಯೋವನ್ನು ಚಿತ್ರೀಕರಿಸಬಹುದಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಇದು ಆನ್ ಆಗಿರುತ್ತದೆ. ಪೊಲೀಸರ ಧ್ವನಿಯು ಇದರಲ್ಲಿ ಮುದ್ರಿತವಾದರೆ, ಎದುರುಗಡೆ ಇರುವವರ ಚಿತ್ರ ಹಾಗೂ ಅಲ್ಲಿನ ಪ್ರತಿ ಆಗುಹೋಗುಗಳೂ ಅದರಲ್ಲಿ ಚಿತ್ರಿತವಾಗುತ್ತದೆ. ಹೀಗಾಗಿ ದಂಡ ವಿಧಿಸುವಾಗ ಯಾವುದೇ ಸಮಸ್ಯೆ ಎದುರಾದರೆ ಅವೆಲ್ಲವೂ ಈಗ ದೃಶ್ಯರೂಪದಲ್ಲಿ ದಾಖಲಾಗುತ್ತದೆ.
      ಇನ್ನು ಪ್ರತಿಯೊಂದು ಬ್ಲಾಕ್ ಬೆರಿ ಉಪಕರಣಕ್ಕೂ ನಿಗದಿತ ಸಂಖ್ಯೆ ಇರುತ್ತದೆ. ಆದ್ದರಿಂದ ಆ ಉಪಕರಣದಲ್ಲಿ ಎಷ್ಟು ಮೊಕದ್ದಮೆಗಳು ದಾಖಲಾಗಿವೆ? ಅವುಗಳಿಂದ ಎಷ್ಟು ಮೊತ್ತ ದಂಡ ಸಂಗ್ರಹವಾಗಿವೆ? ಎಂಬುದು ನಿಖರವಾಗಿ ಆನ್‍ಲೈನ್‍ನಲ್ಲೇ ಪೆÇಲೀಸ್ ಇಲಾಖೆಯ ಕಚೇರಿಯೊಳಗಿನ ಕಂಪ್ಯೂಟರ್‍ಗಳಲ್ಲಿ ಸ್ವಯಂಚಾಲಿತವಾಗಿ ದಾಖಲಾಗುತ್ತವೆ. ಸಂಬಂಧಿಸಿದ ಅಧಿಕಾರಿಗಳು ಬೆಂಗಳೂರಿನಲ್ಲಿ ಅಥವಾ ತುಮಕೂರಿನಲ್ಲಿ ತಾವಿರುವೆಡೆಯಿಂದಲೇ ಇವೆಲ್ಲವನ್ನೂ ಪರಿಶೀಲಿಸಬಹುದಾಗಿದೆ. ಸಂಗ್ರಹಿಸಲಾದ ಮೊತ್ತವನ್ನು ತಕ್ಷಣವೇ ಪೊಲೀಸರು ತಮ್ಮ ವ್ಯಾಪ್ತಿಯ ಠಾಣೆಯಲ್ಲಿ ಸಂದಾಯ ಮಾಡುತ್ತಾರೆ. ಬಳಿಕ ಅದು ಮುಂದಿನ ಪ್ರಕ್ರಿಯೆಗೆ ಒಳಪಡುತ್ತದೆ.
      ಹೊಸ ದಂಡದ ಪ್ರಕಾರ ಟ್ರಾಫಿಕ್ ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರ ಗೋಳಾಟ ಅವರನ್ನು ಅಸಹಾಯಕರನ್ನಾಗಿಸುತ್ತಿದೆ. ಹೊಸ ದಂಡವನ್ನು ಪೊಲೀಸರು ವಿಧಿಸಲೇಬೇಕಾಗಿದೆ. ಇತ್ತ ಸಾರ್ವಜನಿಕರು ಅಷ್ಟು ದೊಡ್ಡ ಮೊತ್ತವನ್ನು ತೆರಲಾಗದೆ ಗೋಳಾಡುವುದು ಬಹುತೇಕ ಸಾಮಾನ್ಯ ದೃಶ್ಯವಾಗಿದೆ. ಮೊದಲಾದರೆ ಕೇವಲ 100 ರೂ. ದಂಡವನ್ನು ಅತಿ ನಿರ್ಲಕ್ಷೃದಿಂದ ತೆತ್ತು ಹೋಗುತ್ತಿದ್ದ ಅದೇ ಸಾರ್ವಜನಿಕರು ಇದೀಗ 1000 ರೂ., 2000 ರೂ., 5000 ರೂ. ದಂಡ ತೆರಲು ಗೋಳಾಡುವಂತಾಗಿದೆ ಎಂದು ಮೂಲಗಳು ತಿಳಿಸಿವೆ.
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link