ಕುಣಿಗಲ್
ತಾಲ್ಲೂಕು ಮಟ್ಟದ ದಲಿತರ ಹಿತರಕ್ಷಣಾ ಸಮಿತಿ ಸಭೆಗೆÉ ಭಾಗವಹಿಸದೇ ಇರುವ ಅಧಿಕಾರಿಗಳಿಗೆ ಶೌಕಾಸ್ ನೋಟೀಸ್ ನೀಡುವಂತೆ ತಹಸೀಲ್ದಾರ್ ವಿಶ್ವನಾಥ್ ಸೂಚಿಸಿದರು.
ತಾಲ್ಲೂಕು ಪಂಚಾಯ್ತಿ ಸಭಾಗಂಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದಲಿತ ಹಿತರಕ್ಷಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ,ತಾಲ್ಲೂಕು ಮಟ್ಟದ ದಲಿತರ ಕುಂದು ಕೊರತೆಗಳ ಸಭೆಗೆÉ ತಾಲ್ಲೂಕು ಮಟ್ಟದ ಅಧಿಕಾರಿಗಳು ಯಾವುದೆ ಕಾರಣ ನೀಡದೇ ತಮ್ಮ ಅನುಮತಿ ಪಡೆಯದೇ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ಶೌಕಾಸ್ ನೋಟೀಸ್ ನೀಡುವಂತೆ ಸಮಾಜ ಕಲ್ಯಾಣ ಅಧಿಕಾರಿಗೆ ಸೂಚಿಸಿದರು.
ಕಳೆದ ನಾಲ್ಕು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನವನ್ನ ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದು,ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ದಲಿತ ಮುಖಂಡರಾದ ವರದರಾಜು,ಶಿವಶಂಕರ್,ರಾಮಚಂದ್ರಯ್ಯ, ಎಸ್.ಆರ್.ಚಿಕ್ಕಣ್ಣ, ದಲಿತನಾರಾಯಣ್ ಒತ್ತಾಯಿಸಿದಾಗ, ನಿರ್ಮಾಣಕ್ಕೆಂದು 1.2 ಕೋಟಿ ಹಣವಿದ್ದು,ಶಾಸಕರಾದ ಡಾ ರಂಗನಾಥ್ 10 ಕೋಟಿಯಲ್ಲಿ ಸುಂದರ ಭವನ ಕೈಗೊಳ್ಳಲು ಬೇರೆ ಜಾಗ ಹುಡುಕುತ್ತಿರುವುದರಿಂದ ವಿಳಂಬವಾಗಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಜಯಣ್ಣ ವಿವರಿಸಿದಾಗ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿ ಕೂಡಲೇ ಈಗಿರುವ ಜಾಗದಲ್ಲಿ ಇರುವ ಟ್ಯಾಂಕ್ ಹಾಗೂ ಕಲ್ಲು ಬಂಡೆಗಳನ್ನ ತೆರವುಗೊಳಿಸಿ ನಕ್ಷೆ ತಯಾರಿಸಿ ಕೆಲಸ ಆರಂಭಿಸಬೇಕೆಂದು ಮುಖಂಡರು ಒತ್ತಾಯ ಮಾಡಿದರು.
ದಲಿತರಿಗೆ ಸ್ಮಶಾನವಿಲ್ಲ,ಕುಡಿಯುವ ನೀರಿನ ಸಮಸ್ಯೆ ಇದೆ,ಕಂದಾಯ ಇಲಾಖೆಯಲ್ಲಿ ಸರ್ವೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ,ಜಮೀನು ಒತ್ತುವರಿ ಬಗ್ಗೆ ಕ್ರಮ ಕೈಗೊಂಡಿಲ್ಲ,ಈ ಬಗ್ಗೆ ಕ್ರಮ ತೆಗೆದುಕೊಂಡು ದಲಿತರಿಗೆ ಸಿಗಬೇಕಾದ ಸೌಲಭ್ಯಗಳನ್ನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಇಓ ಶಿವರಾಜಯ್ಯ,,ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮರಾಜು,ಸಮಾಜ ಕಲ್ಯಾಣ ಅಧಿಕಾರಿ ಜಯಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








