ಬೆಂಗಳೂರು
ಜೆಡಿಎಸ್-ಕಾಂಗ್ರೆಸ್‍ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ, ಆದರೆ ಸುಪ್ರಿಂಕೋರ್ಟ್ ನಲ್ಲಿ ಅನರ್ಹ ಶಾಸಕರವ ಅರ್ಜಿತೀರ್ಪು ಇನ್ನೂ ನಿರ್ಧಾರವಾಗದ ಕಾರಣ ಅಡಕತ್ತರಿಯಲ್ಲಿ ಸಿಲುಕಿದಂತಾಗಿದ್ದಾರೆ.ಅನರ್ಹ ಶಾಸಕರು ತಮ್ಮ ಸಂಬಂಧಿಕರನ್ನು ಕಣಕ್ಕಿಳಿಸಲು ಚಿಂತಿಸುತ್ತಿದ್ದಾರೆ, ಬಿಜೆಪಿ ಕೂಡ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತಿದೆ. ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿ ಅನರ್ಹಗೊಂಡಿದ್ದು, ಕಾಂಗ್ರೆಸ್ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ. ಹಿರೇಕೆರೂರು ಶಾಸಕ ಬಿಸಿ ಪಾಟೀಲ್‍ತಮ್ಮ ಪುತ್ರಿ ಸೃಷ್ಠಿ ಪಾಟೀಲ್‍ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ.
ಕೆ.ಆರ್ ಪೇಟೆಅನರ್ಹ ಶಾಸಕ ನಾರಾಯಣಗೌಡಕೂಡತಮ್ಮ ಸಂಬಂಧಿಕರನ್ನ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ, ಆದರೆ ಜೆಡಿಎಸ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ,
ಕೆ.ಆರ್ ಪೇಟೆಯಲ್ಲಿ ಮಾಜಿ ಪ್ರಧಾನಿ ಎಚ್ .ಡಿ ದೇವೇಗೌಡರ ಪುತ್ರಿಅನಸೂಯ ಮಂಜುನಾಥ್‍ಅವರನ್ನು ಕಣಕ್ಕಿಳಿಸಲು ಸಿದ್ದತೆ ನಡೆಸುತ್ತಿದ್ದಾರೆ, ಅನರ್ಹ ಶಾಸಕ ನಾರಾಯಣಗೌಡ ತಮ್ಮ ಪತ್ನಿ ದೇವಕಿ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲು ಲಾಭಿ ನಡೆಸುತ್ತಿದ್ದಾರೆ.
ಎಚ್.ವಿಶ್ವನಾಥ್ ಮತ್ತು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಮ್ಮ ಪುತ್ರರಿಗೆ ಟಿಕೆಟ್ ಕೊಡಿಸಲು ಹರ ಸಾಹಸ ಪಡುತ್ತಿದ್ದಾರೆ.
ಇನ್ನು ಅಥಣಿಯಿಂದ ಡಿಸಿಎಂ ಲಕ್ಷ್ಮಣ ಸವದಿ ಕಣಕ್ಕಿಳಿಲಿಸಲು ಚಿಂತನೆ ನಡೆಸುತ್ತಿದ್ದಾರೆ, ಯಲ್ಲಾಪುರದಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ತಮ್ಮ ಪುತ್ರ ವಿವೇಕ್ ಹೆಬ್ಬಾರ್ ಅವರನ್ನು ಮುಂಚೂಣಿಗೆ ತರಲು ಪ್ರಯತ್ನಿಸುತ್ತಿದ್ದಾರೆ, ಒಂದು ವೇಳೆ ಟಿಕೆಟ್ ಸಿಗದಿದ್ದರೇ ಅನರ ಪತ್ನಿ ವನಜಾಕ್ಷಿ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅನರ್ಹ ಶಾಸಕರು ತಮ್ಮ ಕ್ಷೇತ್ರಗಳನ್ನು ತಮ್ಮಲ್ಲೇ ಉಳಿಸಿಕೊಳ್ಳಲು ತಮ್ಮ ಸಂಬಂಧಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ, ಪಕ್ಷಗಳು ಕೂಡ ಇದೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿವೆ.
ಗೊಂದಲದಲ್ಲಿ ಕಾರ್ಯಕರ್ತರು
ಅನರ್ಹ ಶಾಸಕರ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಕೇವಲ ಶಾಸಕರು ಮಾತ್ರ ಗೊಂದಲದಲ್ಲಿ ಮುಳುಗಿಲ್ಲ, ಸ್ಥಳೀಯ ಕಾರ್ಯಕರ್ತರು ಹಾಗೂ ಕೌನ್ಸಿಲರ್ ಮತ್ತು ಪಂಚಾಯಿತಿ ಸದಸ್ಯರುಗಳು ಕೂಡ ಗೊಂದಲಕ್ಕೆ ಸಿಲುಕಿದ್ದಾರೆ.
ಅನರ್ಹರಲ್ಲಿ 12 ಕಾಂಗ್ರೆಸ್ ಶಾಸಕರಿದ್ದು, ಉಳಿದ ಮೂವರು ಜೆಡಿಎಸ್ ಶಾಸಕರಿದ್ದಾರೆ, ಹಿಂದಿನ ಚುನಾವಣೆಯಲ್ಲಿ ಈ ಶಾಸಕರುಗೆದ್ದು ಬರುವಲ್ಲಿ ಬೆಂಬಲ ನೀಡಿದ್ದ ಮುಖಂಡರು ಈಗ ಡೋಲಾಯಮಾನದಲ್ಲಿದ್ದಾರೆ, ತಮ್ಮ ನಿಷ್ಠೆ ತಮ್ಮ ನಾಯಕನಿಗೋಅಥವಾ ಪಕ್ಷಕ್ಕೆ ನೀಡುವುದೋ ಎಂಬ ಗೊಂದಲದಲ್ಲಿದ್ದಾರೆ.
ಬೆಂಗಳೂರಿನ ಯಶವಂತಪುರ, ಕೆ.ಆರ್ ಪುರಂ, ಶಿವಾಜಿನಗರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ, ಕಾಂಗ್ರೆಸ್ ಶಾಸಕರು ಗೆದ್ದಿದ್ದರು.ಮಹಾಲಕ್ಷ್ಮಿ ಲೇಔಟ್‍ನಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾಗಿದ್ದರು.
ಯಶವಂತಪುರ ವಿಧಾನಸಭೆ ಕ್ಷೇತ್ರಗಳಲ್ಲಿ ಮೂರು ಬಿಬಿಎಂಪಿ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕೌನ್ಸಿಲರ್‍ಗಳಿದ್ದಾರೆ, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅನರ್ಹಗೊಂಡಿದ್ದಾರೆ. ಕೆ.ಆರ್ ಪುರಂ ನಲ್ಲಿ ಭೈರತಿ ಬಸವರಾಜ್ ಅವರಿಗೆ ಇಬ್ಬರು ಕಾಂಗ್ರೆಸ್ ಕೌನ್ಸಿಲರ್‍ಗಳು ಬೆಂಬಲಿಸಿದ್ದರು.
ಇನ್ನೂ ಮಹಾಲಕ್ಷ್ಮಿ ಲೇಔಟ್ ನಲ್ಲಿಇರುವ ಇಬ್ಬರು ಜೆಡಿಎಸ್ ಕೌನ್ಸಿಲರ್‍ಗಳು ಅನರ್ಹ ಶಾಸಕ ಗೋಪಾಲಯ್ಯಅವರನ್ನು ಬೆಂಬಲಿಸಿದ್ದರು.ಹೀಗಾಗಿ ಉಪ ಚುನಾವಣೆ ಘೋಷಣೆಯಾಗಿರುವ ಎಲ್ಲಾ ಕ್ಷೇತ್ರಗಳಲ್ಲಿ ಗೊಂದಲ ಮೂಡಿದೆ. ತಮ್ಮ ನಾಯಕನನ್ನು ಬೆಂಬಲಿಸಬೇಕೋ ಅಥವಾ ಪಕ್ಷಕ್ಕೆ ನಿಷ್ಠೆ ತೋರಿಸಬೇಕೋ ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








