ಹಫೀಸ್ ಗೆ ತಿಂಗಳ ಖರ್ಚಿಗೆ 1.5ಲಕ್ಷ ಮೊಂಜೂರು ಮಾಡಿದ ವಿಶ್ವಸಂಸ್ಥೆ..!

ನ್ಯೂಯಾರ್ಕ್

     ಜಾಗತಿಕ ಭಯೋತ್ಪಾದಕನಾಗಿರುವ ಹಫೀಜ್ ಸಯೀದ್ ತನ್ನ ಕುಟುಂಬವನ್ನು ಪೋಷಿಸಲು ಅವನಿಗೆ ತಿಂಗಳಿಗೆ ಖಾತೆಯಿಂದ ಹಣತೆಗೆಯುವ ಸೌಲಭ್ಯ ನೀಡಬೇಕೆಂದು ಪಾಕಿಸ್ಥಾನ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವಸಂಸ್ಥೆ ಅಂಗೀಕರಿಸಿದೆ ಎಂದು ಪಾಕಿಸ್ತಾನ ತಿಳಿಸಿದೆ .

    ಹಫೀಸ್ ಕುಟುಂಬದ ಾಧಾರ ಸ್ಥಂಭವಾಗಿದ್ದು ಅವನೆ ಕುಟುಂಬದ ಆಹಾರ ,ಬಟ್ಟೆ ಇನ್ನಿತರೆ ಅಗತ್ಯಗಳನ್ನು ನೋಡಿಕೊಳ್ಳತ್ತಿದ್ದಾನೆ , ಆದ್ದರಿಂದ ತಿಂಗಳ ಖರ್ಚಿಗಾಗಿ 1,50,000 ರುಪಾಯಿ ಹಣವನ್ನಾದರೂ ವಿಥ್ ಡ್ರಾ ಮಾಡಲು ಅವಕಾಶ ನೀಡಬೇಕು” ಎಂದು ಪಾಕಿಸ್ತಾನ ಸರ್ಕಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಮನವಿ ಮಾಡಿದೆ.

    26/11 ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಇದೇ ಹಫೀಜ್ ಸಯೀದ್. ಮನವಿ ಇರುವ ಪತ್ರವನ್ನು ಆಗಸ್ಟ್ 15 ಕ್ಕೆ ಪಾಕಿಸ್ತಾನ ಸಲ್ಲಿಸಿತ್ತು .ವಿಶ್ವ ಸಂಸ್ಥೆ ನೀಡಿದ್ದ ಗಡುವಿನೊಳಗಾಗಿ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ  ಮನವಿಯನ್ನು ವಿಶ್ವ ಸಂಸಂಸ್ಥೆ ಪುರಸ್ಕರಿಸಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link