ಕೋಲ್ಕತ್ತಾ:
ಕಳೆದ ತಿಂಗಳು ಪ್ರಾಯೋಗಿಕವಾಗಿ ಅಸ್ಸಾಂನಲ್ಲಿ ಜಾರಿ ಮಾಡಿದ್ದ ಎನ್.ಆರ್.ಸಿ ಅನ್ನು ಈಗ ಪಶ್ಚಿಮ ಬಂಗಾಳಕ್ಕೂ ವಿಸ್ತರಿಸುತೇವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಅದಕ್ಕೂ ಮುನ್ನ ಎಲ್ಲಾ ಹಿಂದೂ, ಸಿಖ್ಖ್, ಜೈನ ಮತ್ತು ಬೌದ್ಧ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡಲು ಪೌರತ್ವ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಅಸ್ಸಾಂಗೆ ಸೀಮಿತವಾಗಿದ್ದ ಎನ್‌ಆರ್‌ಸಿಯನ್ನು ಪಶ್ಚಿಮ ಬಂಗಾಳದಲ್ಲಿಯೂ ಸಹ ಜಾರಿಗೆ ತರುವುದು ಖಚಿತ ಎಂದು ಹೇಳಿದ್ದಾರೆ. ಎನ್‌ಆರ್‌ಸಿ ಕುರಿತ ಸೆಮಿನಾರ್‌ನಲ್ಲಿ ಮಾತನಾಡಿದ ಶಾ ಬಂಗಾಳದ ಟಿಎಂಸಿ ಸರ್ಕಾರ ಪೌರತ್ವ ಪಟ್ಟಿಯ ಕುರಿತಂತೆ ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಹೇಳಿದ್ದಾರೆ.