ನವದೆಹಲಿ
ಈರುಳ್ಳಿ ಬೆಲೆ ಏರಿಕೆ ಮತ್ತು ಇಳಿಕೆ ಬಹಳ ಸುದ್ದಿ ಮಾಡಿತ್ತು. ಆದರೆ ಈಗ ಬಡವರ ಅಪೆಲ್ ಎಂದು ಕರೆಯುವ ಟಮೊಟೋ ಬೆಲೆ ಏರಿಕೆಯ ಸರದಿಯ ಕಾಲ.ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಟಮೋಟೋ ಬೆಲೆ ಕೇಳಿದರೆ ಸಾಕು ಜನತೆ ಬೆಚ್ಚಬೀಳುವಂತಾಗಿದೆ. ಟಮೊಟೋ ಬೆಳೆಯುವ ಅನೇಕ ರಾಜ್ಯಗಳಲ್ಲಿ ವಿಪರೀತ ಮಳೆಯಿಂದ ಬೇಡಿಕೆಯಷ್ಟು ಪೂರೈಕೆ ಮಾರುಕಟ್ಟೆಗೆ ಬಾರದ ಕಾರಣ ಬಹಳ ಅಡಚಣೆಯಾಗಿದೆ, ಪರಿಣಾಮ ದೆಹಲಿಯಲ್ಲಿ ಟೊಮೊಟೋ ಬೆಲೆ ಕೆಜಿಗೆ 80 ರೂಪಾಯಿಗೆ ಮುಟ್ಟಿದೆ.
ಕಳೆದ ವಾರ ಭಾರೀ ಏರಿಕೆಯಾಗಿದ್ದ ಈರುಳ್ಳಿಯ ಬೆಲೆ ಈ ವಾರ ಸ್ವಲ್ಪ ಕಡಿಮೆಯಾಗಿದ್ದು ಜನರು ನಿಟ್ಟಿಸಿರು ಬಿಡುತ್ತಿರುವಾಗಲೇ ಟಮೊಟೋ ಬೆಲೆ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ.ದೆಹಲಿಯಲ್ಲಿ ಕಳೆದ ಒಂದರಂದು ರಂದು ಕೆಜಿಗೆ 45 ರೂ. ಇದ್ದ ಟೊಮೊಟೋ ಬೆಲೆ ಈಗ 54 ರೂಪಾಯಿಗೆ ತಲುಪಿದೆ ಇದೆ ರೀತಿ . ಕೋಲ್ಕತಾದಲ್ಲಿ ಸಹ ಕೆಜಿಗೆ 60 ರೂಪಾಯಿ ಮುಂಬೈಯಲ್ಲಿ 54 ರೂಪಾಯಿ ಚೆನ್ನೈಯಲ್ಲಿ 40 ರೂಪಾಯಿಗೆ ಹೆಚ್ಚಳವಾಗಿ ಜನರ ಜೇಬು ಸುಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
