ಟೋಕಿಯೋ:
ಭಾರತದ ಮಿತ್ರ ರಾಷ್ಟ್ರ ಹಾಗು ದ್ವೀಪ ರಾಷ್ಟ್ರವೂ ಸಹ ಆಗಿರುವ ಜಪಾನ್ ನಲ್ಲಿ ಹೆಗ್ ಬಿಸ್ ಚಂಡಮಾರುತ ಅಪ್ಪಳಿಸಿದ್ದು,ಇದರ ಪರಿಣಾಮ ಜಪಾನ್ ದೇಶದಾಧ್ಯಂತ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.ಬಿರುಗಾಳಿ ಸಹಿತ ಮಳೆಯಿಂದಾಗಿ ಈ ವರೆಗೂ 11 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಟೋಕಿಯೋ ಮೆಟ್ರೋಪೊಲಿಸ್ ಸೇರಿದಂತೆ ಹಲವೆಡೆ ವಾಸವಿರುವ 42 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಸ್ಥಳ ತೊರೆಯುವಂತೆ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ.ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿನ ಆಡಳಿತ ಮುಂಜಾಗ್ರತಾ ಕ್ರಮವಾಗಿ ಸ್ಥಳಿಯರನ್ನು ಸ್ಥಳಾಂತರಿಸಿದ್ದಾರೆ.
