ವ್ಯಾಟಿಕನ್ :
ಕ್ರಿಶ್ಚಿಯಾನಿಟಿಯ ಫಾದರ್ ಅಥವಾ ಮದರ್ ಆದವರಿಗೆ ಸಿಗುವ ಅತ್ಯಂತ ಉನ್ನತ ಪದವಿಯಾದ ಸಂತ ಪದವಿಯನ್ನು ವ್ಯಾಟಿಕನ್ ಸಿಟಿಯ ಪೋಪ್ ಫ್ರಾನ್ಸಿಸ್ ಭಾರತದಲ್ಲಿ ತಮ್ಮ ಜೀವಮಾನವನ್ನು ಸೇವೆಗಾಗಿಯೇ ತೊಡಗಿಸಿಕೊಂಡ ಒಬ್ಬ ಸಿಸ್ಟರ್ ಗೆ ನೀಡಿದ್ದಾರೆ.
ಕೇರಳದ ಸಿಸ್ಟರ್ ಮರಿಯಂ ತ್ರೇಸಿಯಾ ಅವರಿಗೆ ವ್ಯಾಟಿಕನ್ ಸಿಟಿಯಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪೋಪ್ ಫ್ರಾನ್ಸಿಸ್ ಸಂತ ಪದವಿ ಘೋಷಿಸಿದ್ದಾರೆ.ಈ ವಿಶೇಷ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿ. ಮುರಳೀಧರನ್ ನೇತೃತ್ವದ ಭಾರತ ನಿಯೋಗ ಹಾಜರಿತ್ತು ಎನ್ನಲಾಗಿದೆ.
1876ರ ಏಪ್ರಿಲ್ 26 ರಂದು ಜನಿಸಿದ ಮರಿಯಂ ತ್ರೇಸಿಯಾ,1914ರಲ್ಲಿ ತ್ರಿಶ್ಯೂರಿನಲ್ಲಿ ಸಿಸ್ಟರ್ಸ್ ಆಫ್ ಹೋಲಿ ಫ್ಯಾಮಿಲಿ ಪ್ರಾರ್ಥನಾ ಸಭೆಯನ್ನು ಆರಂಭಿಸಿದ್ದರು ಮತ್ತು ಅವರು 1926ರ ಜೂನ್ 8 ರಂದು ದೈವಾಧೀನರಾಗಿದ್ದರು.
ಅಂದಿನ ಪೋಪ್ ಜಾನ್ ಪಾಲ್ ಮರಿಯಂ ತ್ರೇಸಿಯಾ ಅವರನ್ನು ಪವಿತ್ರ ಎಂದು ಘೋಷಿಸಿದ್ದರು.ಈ ವಿಚಾರವಾಗಿ ಸಿಸ್ಟರ್ ಆಫ್ ಹೋಲಿ ಫ್ಯಾಮಿಲಿಯ ಸದಸ್ಯರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಶುಭ ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








