ಜಮ್ಮು-ಕಾಶ್ಮೀರ ಮತ್ತು ಲಡಾಕ್ ನ ನೂತನ ಗವರ್ನರ್ ಗಳ ಅಧಿಕಾರ ಸ್ವೀಕಾರ..!

 ಶ್ರೀನಗರ

   ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತ್ತಿ ಬಳಿಕ ಲಡಾಕ್ ನ ಮೊದಲ ಗವರ್ನರ್ ಆಗಿ ಗುರುವಾರ ರಾಧಾಕೃಷ್ಣ ಮಾಥೂರ್ ಪ್ರಮಾಣವಚನ ಸ್ವೀಕರಿಸಿದರು. ಜಮ್ಮು-ಕಾಶ್ಮೀರ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ನ್ಯಾಯಾಧೀಶ ಗೀತಾ ಮಿತ್ತಲ್ ಅವರು ರಾಧಾಕೃಷ್ಣ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಲೇಹ್ ನಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿದರು.

  ಜಮ್ಮು ಮತ್ತು ಕಾಶ್ಮೀರದ ಗವರ್ನರ್ ಆಗಿ ಗಿರೀಶ್ ಚಂದ್ರ ಮುರ್ಮು ಅಧಿಕಾರ ವಹಿಸಿಕೊಂಡರು. ಸರ್ಕಾರದ ಕಚೇರಿ ಶ್ರೀನಗರದಿಂದ ಜಮ್ಮುವಿಗೆ ವರ್ಗಾವಣೆಗೊಂಡರೂ ಸಹ ನೂತನ ಗವರ್ನರ್ ಅವರ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಕಾಶ್ಮೀರದಲ್ಲಿಯೇ ನಡೆಸಲಾಗಿದೆ ದೇಶದ ಬೇರೆ ಭಾಗಗಳ ಜೊತೆ ಸೇರಿಕೊಂಡು ಸಮಗ್ರ ಭಾರತವಾಗಿದೆ ಎಂದು ಬಿಂಬಿಸಲು ಶ್ರೀನಗರದಲ್ಲಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link