ಗೋಕಾಕ್ ಚಳುವಳಿಯಿಂದ ಕನ್ನಡಿಗರಿಗೆ ಭಾಷಾಭಿಮಾನ ಮೂಡಿದೆ

ಸಿರುಗುಪ್ಪ
   ಮಹರಾಷ್ಟ್ರ, ಮದ್ರಾಸ್ ಪ್ರಾಂತ್ಯದಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಕನ್ನಡ ಭಾಷೆಯನ್ನು ತಮಿಳು, ತೆಲುಗು ಮರಾಠಿ ಭಾಷೆಯ ಪ್ರಭಾವದಿಂದ ಕನ್ನಡ ಭಾಷೆಯನ್ನು ಉಳಿಸುವುದಕ್ಕಾಗಿ ಸಮಗ್ರ ಕರ್ನಾಟಕದ ಉದಯಕ್ಕೆ ಅಂದಿನ ಆಲೂರು ವೆಂಕಟರಾಮರಾಯರು ಹೋರಾಟವನ್ನು ಪ್ರಾರಂಭಿಸಿದರು  ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು
   ನಗರದ ತಹಶೀಲ್ದಾರ್ ಕಛೇರಿ ಆವರಣದಲ್ಲಿ 64ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯವು ಬಂಗಾರ, ಕಬ್ಬಿಣದಂತಹ ಖನೀಜ ಸಂಪತ್ತು, ವನ್ಯ ಸಂಪತ್ತು, ಅರಣ್ಯ ಸಂಪತ್ತು, ಜೀವ ನದಿಗಳು, ಪ್ರಕೃತಿ ಸಂಪತ್ತನ್ನು ಹೊಂದಿದ ಅತ್ಯಂತ ಸಂಪತ್ಭರಿತ ನಾಡಾಗಿದ್ದು, ಆದೋನಿ, ಆಲೂರು, ರಾಯದುರ್ಗಾವನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಆಗಲಿಲ್ಲ, ಆದರೆ ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕನ್ನು ರಾಜ್ಯದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಯಿತು.  ಗೋಕಾಕ್ ಚಳುವಳಿಯಿಂದ ರಾಜ್ಯಾದ್ಯಂತ ಕನ್ನಡ ಭಾಷೆಯ ಬಗ್ಗೆ ಜನರಿಗೆ ಅಭಿಮಾನ ಮೂಡಿತು. ನಮ್ಮೆಲ್ಲರ ತಾಯಿ ಭಾಷೆ ಕನ್ನಡವಾಗಿರಬೇಕು, ರಾಷ್ಟ್ರಬಾಷೆ ಹಿಂದಿ, ವ್ಯವಹಾರಿಕ ಭಾಷೆ ಇಂಗ್ಲೀಷ್‍ನ್ನು ಗೌರವದಿಂದ ಕಾಣಿ ಎಂದು ತಿಳಿಸಿದರು.
   ತಹಶೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ 1905ರಲ್ಲಿ ಕನ್ನಡ ನಾಡಿನ ಕನಸನ್ನು ಗಡಿನಾಡಿನ ಆಲೂರು ವೆಂಕಟರಾಯರು ಕಾಣುವ ಮೂಲಕ ಪ್ರತ್ಯೇಕ ಕನ್ನಡ ನಾಡಿನ ಪರಿಕಲ್ಪನೆಯನ್ನು ನೀಡಿದರು.  ಬಸವಣ್ಣ, ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದರು. ಹೊಸಗನ್ನಡಕ್ಕೆ ಕುವೆಂಪು, ಶಿವರಾಮಕಾರಂತ, ಶಿಶುನಾಳ ಶರೀಫ್, ಮಾಸ್ತಿ ವೆಂಕಟೇಶ ಅಯ್ಯಂಗಾರ್‍ರವರ ಕೊಡುಗೆ ಅಮೋಘವಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರ ಸಾಧನೆ ಅಮೋಘವಾಗಿದೆ ಎಂದು ತಿಳಿಸಿದರು.
    ವಿಶೇಷ ಉಪನ್ಯಾಸ ನೀಡಿದ ಮರುಳಾರಾಧ್ಯ ಮಾತನಾಡಿ 1920ರಲ್ಲಿ ಬಳ್ಳಾರಿಯಲ್ಲಿ ಮೊಟ್ಟಮೊದಲಬಾರಿಗೆ ಕೋ.ಚನ್ನಬಸಪ್ಪನವರು ನಾಂದಿ ಹಾಡಿದರೆ, ಎಲೆ ಮಲ್ಲೇಶಪ್ಪ, ಗಾದಿಲಿಂಗನಗೌಡ, ರೇವಣಸಿದ್ದಯ್ಯ, ನಾಮಬಸವರಾಜಯ್ಯಸ್ವಾಮಿ, ರಂಜಾನ್‍ಸಾಬ್, ಇಬ್ರಾಹಿಂಸಾಬ್ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.  
     ಕರ್ನೂಲ್ ಜಿಲ್ಲೆಯಲ್ಲಿ ಕನ್ನಡ ಭಾಷಿಕರ 50ಕ್ಕೂ ಹೆಚ್ಚು ಗ್ರಾಮಗಳಿದ್ದು, ಅವುಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಅಲ್ಲಿನ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಿದಾಗ ಮಾತ್ರ ಗಡಿ ಸಮಸ್ಯೆ ಉಂಟಾಗುವುದಿಲ್ಲ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ದೇವಮ್ಮ, ಜಿ.ಪಂ.ಸದಸ್ಯೆ ರಾಧ ಧರಪ್ಪನಾಯಕ, ನಗರಸಭೆ ಪೌರಾಯುಕ್ತ ಪ್ರೇಮ್‍ಚಾಲ್ರ್ಸ್, ತಾ.ಪಂ.ಇ.ಒ. ಶಿವಪ್ಪ ಸುಬೇದಾರ್, ಬಿ.ಇ.ಒ. ಪಿ.ಡಿ.ಭಜಂತ್ರಿ, ಸಿ.ಪಿ.ಐ. ಪವಾರ್, ಎ.ಪಿ.ಎಂ.ಸಿ.ಅಧ್ಯಕ್ಷ ಬಸವರಾಜ, ಕ.ಸಾ.ಪ.ತಾ.ಅದ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಮುಖಂಡರಾದ ಶಿವಕುಮಾರತಾತ, ಎಂ.ಪಂಪಾಪತಿ, ಶಂಕ್ರಪ್ಪ, ಶಾಂತಮೂರ್ತಿಸ್ವಾಮಿ, ಕುಂಟ್ನಾಳ್ ಮಲ್ಲಿಕಾರ್ಜುನಸ್ವಾಮಿ, ಗಂಗಾರಾಮ್‍ಸಿಂಗ್, ಆರ್.ಸಿ.ಪಂಪನಗೌಡ ಇನ್ನಿತರರು ಇದ್ದರು. 
 
       ವಿವಿಧ ಶಾಲೆಗಳ ಮಕ್ಕಳು ಮಹಾತ್ಮರ ಹಾಗೂ ವಿವಿಧ ಸಂಸ್ಕøತಿಯನ್ನು ಪರಿಚಯಿಸುವ ಸ್ತಬ್ಧ ಚಿತ್ರಗಳ ಮೆರವಣಿಗೆಯಲ್ಲಿ ಪ್ರಥಮ ಸ್ಥಾನವನ್ನು ಚಾಗಿ ನರಸಮ್ಮ ನರಸಯ್ಯ ಶಾಲೆ ತಂಡ ಪ್ರಥಮ, ಗಾಯತ್ರಿ ಶಾಲೆಯ ಸ್ತಬ್ಧ ಚಿತ್ರಕ್ಕೆ ದ್ವಿತಿಯ ಬಹುಮಾನವನ್ನು ಶಾಸಕರು ವಿತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link