ಗಾಂಧಿ ಕುಟುಂಬದ ಭದ್ರತೆ ಹಿಂತೆಗೆತ : ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ:

    ಕೇಂದ್ರ ಸರ್ಕಾರ ಗಾಂಧಿ ಕುಟುಂಬಕ್ಕೆ ನೀಡಿದ್ದ ವಿಶೇಷ ಭದ್ರತೆಯನ್ನು ಹಿಂಪಡೆದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಉತ್ತರಿಸಬೇಕೆಂದು ಲೋಕಸಭೆಯಲ್ಲಿ  ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

   ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದಾಗ ಗೃಹ ಸಚಿವರು ಸದನದಿಂದ ಹೊರ ನಡೆದಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಏಕೆ ಹಿಂತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರಸ್ ಸದಸ್ಯರು ಪಟ್ಟು ಹಿಡಿದಿದ್ದಾರೆ.

   ಸದ್ಯ ಗಾಂಧಿ ಕುಟುಂಬಕ್ಕೆ ಈಗ ಸಿಆರ್ಪಿಎಫ್ ನ Z ಡ್ ಪ್ಲಸ್ ರಕ್ಷಿಣೆ ನೀಡಲಾಗಿದೆ,ಈ ಭದ್ರತಾವ್ಯವಸ್ಥೆಯಲ್ಲಿ ಸುಮಾರು 100 ಸಿಬ್ಬಂದಿ ಇದ್ದಾರೆ ಎನ್ನಲಾಗಿದೆ.

  ಕಾಂಗ್ರೆಸ್ ಮತ್ತು ಇತರೆ ಪಕ್ಷದ ನಾಯಕರು ಲೋಕಸಭೆಯ ಪ್ರಶ್ನಾವಧಿಯಲ್ಲಿ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ ಕಾರಣ, ಸ್ಪೀಕರ್ ಓಂ ಬಿರ್ಲಾ ಅವರು ತಮ್ಮ ಸ್ಥಾನಗಳಿಗೆ ಮರಳಲು ಕೇಳಿಕೊಂಡರು. ಅವರು ಪ್ರತಿಭಟನೆಯನ್ನು ಮುಂದುವರಿಸುತ್ತಿದ್ದಂತೆ , ಶ್ರೀ ಬಿರ್ಲಾ ಅವರು ಸದನ ನಡೆಸಲು ಸಹಕರಿಸುವಂತೆ ಕೇಳಿಕೊಂಡರು. “ಇಂದು, ರೈತರ ವಿಷಯದ ಬಗ್ಗೆ ಚರ್ಚೆ ನಡೆಯು ತ್ತಿದೆ. ಇಂತಹ ಮಹತ್ವದ ವಿಷಯದ ಕುರಿತು ಚರ್ಚಿಸಲು ನೀವು ಆಸಕ್ತಿ ಹೊಂದಿಲ್ಲವಾದ್ದರಿಂದ ಇದು ಒಳ್ಳೆಯದಲ್ಲ” ಎಂದು ಶ್ರೀ ಬಿರ್ಲಾ ತಿಳಿಸಿದ್ದರು ಎನ್ನಲಾಗಿದೆ.

  ಕಾಂಗ್ರೆಸ್ ನಾಯಕರು “ಪ್ರಧಾನಿ ಉತ್ತರ ನೀಡಿ”, “ದಯವಿಟ್ಟು ಪ್ರತೀಕಾರದ ರಾಜಕೀಯವನ್ನು ನಿಲ್ಲಿಸಿ”, “ಸರ್ವಾಧಿಕಾರ ವನ್ನು ಕೊನೆಗೊಳಿಸಿ” ಮತ್ತು “ನಮಗೆ ನ್ಯಾಯ ಬೇಕು” ಎಂಬ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಪಿಟಿಐ ವರದಿ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link