ತಿರುವನಂತಪುರಂ
ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಜಾರಿಗೆ ತಂದ ಹೊಸ ಸಂಚಾರಿ ನಿಯಮದ ಪ್ರಕಾರ ಸಂಚಾರಿ ನಿಯಮ ಉಲ್ಲಂಘನೆ ಮಾಡಿದೆ ಭಾರೀ ಮೊತ್ತದ ತಂಡ ವಿಧಿಸಲಾಗುತ್ತಿತ್ತು ,ಇದನ್ನೇ ವ್ಯಾಪಾರದಂತೆ ಮಾಡಿಕೊಂಡ ಕೆಲ ಪೊಲೀಸರು ಬೈಕ್ ಸವಾರರಿಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಇದನ್ನು ಮನಗಂಡ ಕೇರಳ ಹೈಕೋರ್ಟ್ ನೀಡಿರುವ ಆದೇಶದ ಪ್ರಕಾರ ಬೈಕ್ ಸವಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಅದೇನೆಂದರೆ ಹೆಲ್ಮೆಟ್ ಹಾಕದ ಬೈಕ್ ಸವಾರರಿಗೆ ಸಂಚಾರಿ ಪೊಲೀಸರು ಕೇವಲ ನಿಲ್ಲಲ್ಲು ಸೂಚಿಸಬಹುದೇ ವಿನಃ ಅವರನ್ನು ನಿಲ್ಲುವಂತೆ ಒತ್ತಡ ಹೇರುವಂತಿಲ್ಲ. ಬಲ ಪ್ರದರ್ಶನ ಮಾಡುವಂತಿಲ್ಲ, ಹಾಗೂ ಅವರನ್ನು ಬೆನ್ನಟ್ಟಿ ಹೋಗುವಂತಿಲ್ಲ ಎಂದು ಹೈಕೋರ್ಟ್ ಆದೇಶ ಮಾಡಿದೆ. ಕೇರಳ ಹೈಕೋರ್ಟ್ನ ಈ ಆದೇಶ ಡಿಸೆಂಬರ್ 1 ರಿಂದ ಜಾರಿ ಬರಲಿದೆ.
ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ, ಕೇರಳ ಹೈಕೋರ್ಟ್ ನ್ಯಾಯಾಧೀಶ ರಾಜಾ ವಿಜಯರಂಗನ್ ಅವರು ಈ ಆದೇಶ ಹೊರಡಿಸಿದ್ದು, ಬೈಕ್ ಸವಾರರನ್ನು ತಡೆಯಲು ಪೊಲೀಸರು ‘ಬಲ ಪ್ರದರ್ಶನ’ ಮಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ