ದಾವಣಗೆರೆ :
ಇನ್ನೂರು ರೂಪಾಯಿಗೆ ಒಂದು ಮೊಬೈಲ್ ಮಾರಲಾಗುತ್ತಿದೆ ಎಂಬ ಸುದ್ದಿ ತಿಳಿದ ಜನರು ಮೊಬೈಲ್ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಂತ ಪರಿಣಾಮ ನೂಕು ನುಗ್ಗುಲು ಏರ್ಪಟ್ಟಿತ್ತು.ನಗರದ ಅಶೋಕ ರಸ್ತೆಯಲ್ಲಿನ ಸಂಗೀತಾ ಮೊಬೈಲ್ಸ್ನ ನೂತನ ಶಾಖೆಯ ಉದ್ಘಾಟನೆಯ ಅಂಗವಾಗಿ 200 ರೂ.ಗೆ ಒಂದು ಮೊಬೈಲ್ ನಿಡುವುದಾಗಿ ಆಫರ್ ಘೋಷಣೆ ಮಾಡಲಾಗಿತ್ತು. ಇದು ಜನರ ಕಿವಿಗೆ ಬೀಳುವುದೇ ತಡ, ಅದನ್ನು ಕೊಳ್ಳಲು ಅಂಗಡಿಯ ಮುಂದೆ ಸಾಲು ಗಟ್ಟಿ ನಿಂತಿದ್ದರು.
ನಗರದಲ್ಲಿ ಸಂಗೀತ ಮೊಬೈಲ್ ಷೋರೂಂ ಇದು ಐದನೆಯದ್ದು, ಹಾಗಾಗಿ ಆರಂಭಿಕ ಕೊಡುಗೆಯಾಗಿ ಕೇವಲ 200 ರೂಗೆ ಒಂದು ಕೀಪ್ಯಾಡ್ ಮೊಬೈಲ್ ಕೊಡುವುದಾಗಿ ಮಾಲೀಕರು ಆಫರ್ ನೀಡಿದ್ದರು. ಮಹಿಳೆಯರು ಕೂಡ ನಿಂತು ಮೊಬೈಲ್ ಪಡೆಯಲು ಪುರುಷರೊಂದಿಗೆ ಪೈಪೋಟಿ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೆಲವರಿಗೆ ಮೊಬೈಲ್ ಸಿಕ್ಕಿದೆ, ಇನ್ನೂ ಕೆಲವರಿಗೆ ಸಿಗದ ಕಾರಣ ಒಲ್ಲದ ಮನಸ್ಸಿನಿಂದ ಬೇಸರದಲ್ಲಿ ಮನೆಯತ್ತ ಸಾಗಿದರು. ಅಗ್ಗದ ಮೊಬೈಲ್ ಪಡೆಯಲು ಜನರು ಹೆಚ್ಚಾಗಿ ಸೇರಿದ್ದಂತೆ ಷೋರೊಂ ಮುಂದೆ ಗದ್ದಲದ ವಾತಾವರಣ ಸೃಷ್ಟಿ ಮಾಡಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೇ ಮಾಡಬೇಕಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








