ಬೆಂಗಳೂರು
ಒಬ್ಬರ ಪ್ರಾಣ ಉಳಿಸಲು ಹೋಗುವ ಅತುರದಲ್ಲಿ ಆಂಬುಲೆನ್ಸ್ನ್ನು ಚಾಲಕ ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಯುವಕರ ಪ್ರಾಣ ತೆಗೆದಿರುವ ದಾರುಣ ಘಟನೆ ಅಶೋಕ್ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಅತುರದಲ್ಲಿದ್ದ ಆಂಬುಲೆನ್ಸ್ನ್ನು ಚಾಲಕ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಹೋಗಿ ಡಿಕ್ಕಿ ಹೊಡೆದು ಸಂಭವಿಸಿದ ಈ ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ಕಾಡುಗೊಂಡನಹಳ್ಳಿಯ ವೆಂಕಟೇಶ ನಗರದ ಮೊಹ್ಮದ್ ಮನ್ಸೂರ್ (28) ಹಾಗೂ ಮೈಸೂರಿನ ಇಬ್ರಾಹಿಂ ಖಲೀಲ್ (23) ಎಂದು ಗುರುತಿಸಲಾಗಿದೆ
ಮೃತರಲ್ಲಿ ಇಬ್ರಾಹಿಂ ಸುಲ್ತಾನ್ ಜ್ಯುವೆಲಱ್ಸ್ನಲ್ಲಿ ಮ್ಯಾನೇಜರ್ ಆಗಿದ್ದರೆ, ಖಲೀಲ್ ಸೇಲ್ಸ್ಮೆನ್ ಆಗಿ ಕೆಲಸ ಮಾಡುತ್ತಿದ್ದರು.ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುವ ಅತುರದಲ್ಲಿದ್ದ ಆಂಬುಲೆನ್ಸ್ನ್ನು ಚಾಲಕ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಹೋಗಿ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಅಶೋಕ್ ನಗರ ಶ್ರೀನಿವಾಗಿಲು ಜಂಕ್ಷನ್ನಲ್ಲಿ ನಡೆದಿದೆ.
ಮಣಿಪಾಲ್ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್, ಮಂಗಳವಾರ ಸಂಜೆ 6.30ರ ವೇಳೆ ಸೇಂಟ್ಜಾನ್ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಮ್ಮ ಆಸ್ಪತ್ರೆಗೆ ಕರೆದುಕೊಂಡು ವೇಗವಾಗಿ ಬರುತ್ತಿತ್ತು.ಮಾರ್ಗಮಧ್ಯೆ ಇನ್ನರಿಂಗ್ ರಸ್ತೆಯಲ್ಲಿ ಶ್ರೀವಾಗಿಲು ಜಂಕ್ಷನ್ನಿಂದ ದೊಂಬಲೂರು ಕಡೆಗೆ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಹೋಗಿ ಎದುರಿನಿಂದ ಬಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರಿಬ್ಬರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.
ಆಂಬುಲೆನ್ಸ್ ಚಾಲಕ ನಿರ್ಲಕ್ಷ್ಯ ವಹಿಸಿ ರೋಗಿಯನ್ನು ಆಸ್ಪತ್ರೆಗೆ ಶೀಘ್ರ ಕರೆದೊಯ್ಯುವ ಆತುರದಲ್ಲಿ ಏಕಮುಖ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತಿ ವೇಗವಾಗಿ ಹೋಗಿರುವುದೇ ಅಪಘಾತಕ್ಕೆ ಕಾರಣವಾಗಿದೆ.ಅಪಘಾತ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆಂಬುಲೆನ್ಸ್ನ್ನು ವಶಕ್ಕೆ ತೆಗೆದುಕೊಂಡು ಚಾಲಕನನ್ನು ಬಂಧಿಸಿರುವ ಅಶೋಕ್ನಗರ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಮೀನಾಕ್ಷಿ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ. ಕೆ.ವಿ. ಜಗದೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








