ಬೆಂಗಳೂರು
ಮಹಿಳೆಯರ ಸುರಕ್ಷತೆ ಮತ್ತು ಜಾಗೃತಿ ಮೂಡಿಸಲು ಮಹಿಳಾ ಪೆÇಲೀಸರ ಬುಲೆಟ್ ರ್ಯಾಲಿಗೆ ಸೋಮವಾರ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಚಾಲನೆ ನೀಡಿದರು.
ಮೈಸೂರು ರಸ್ತೆಯ ಸಿಎಆರ್ ಆವರಣದಿಂದ ಬೆಳಿಗ್ಗೆ 6ಕ್ಕೆ ಹೊರಟ ರ್ಯಾಲಿಯಲ್ಲಿ 20 ಮಹಿಳಾ ಸಬ್ಇನ್ಸ್ಪೆಕ್ಟರ್ (ಪಿಎಸ್ಐ)ಗಳು ಭಾಗವಹಿಸಿದ್ದರು ಬೆಂಗಳೂರಿನಿಂದ ಹೊರಟು ಚಿಕ್ಕಬಳ್ಳಾಪುರದ ನಂದಿಬೆಟ್ಟದ ಬಳಿಯಿರುವ ಭೋಗನಂದಿಶ್ವರ ದೇವಸ್ಥಾನದವರೆಗೆ ಹೋಗಿ ವಾಪಸ್ಸಾಯಿತು.
ಬುಲೆಟ್ ಚಲಾಯಿಸುವುದರ ಬಗ್ಗೆ ಮಹಿಳಾ ಪಿಎಸ್ಸೈಗಳಿಗೆ ತರಬೇತಿ ನೀಡಿ ರ್ಯಾಲಿಗೆ ಸಜ್ಜುಗೊಳಿಸಲಾಗಿತ್ತು. ಮಹಿಳೆಯರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರ್ಯಾಲಿ ಆಯೋಜನೆಗೊಂಡಿದ್ದು,ನಗರದ ಉಪ ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳು ರ್ಯಾಲಿಯಲ್ಲಿ ಭಾಗವಹಿಸಿದ್ದರು.ರ್ಯಾಲಿಗಾಗಿಯೇ ಸುಮಾರು 20 ಮಂದಿ ಮಹಿಳಾ ಸಬ್ಇನ್ಸ್ಪೆಕ್ಟರ್ಗಳಿಗೆ ಬುಲೆಟ್ ತರಬೇತಿ ನೀಡಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








