ದೇಶಕ್ಕೆ ಉತ್ತಮ ಪೌರರಾಗಿ ಹೊರಹೊಮ್ಮಿ: ಶಾಸಕ ಸೋಮಶೇಖರರೆಡ್ಡಿ

ಬಳ್ಳಾರಿ

    ವಿವೇಕರು ವಿಶ್ವಕ್ಕೆ ಕೀರ್ತಿ ತಂದ ಮಹಾನ್ ಗುರುಗಳು, ವಿದ್ಯಾರ್ಥಿಗಳು ವಿವೇಚನೆಯಿಂದ ಆಲೋಚನೆ ಮಾಡಿ ದೇಶಕ್ಕೆ ಒಳ್ಳೆಯ ಪೌರರಾಗಿ ಹೊರಹೊಮ್ಮಬೇಕು ಎಂದು ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗಾರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮತ್ತು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.

   ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗಾರ್‍ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್(ಸ್ವಾಯತ್ತ)ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಉಚಿತ ಲ್ಯಾಪ್‍ಟಾಪ್ ವಿತರಣೆ ಹಾಗೂ ಕಾಲೇಜಿನ ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

    ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಲ್ಯಾಪ್‍ಟಾಪ್ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು. ಪೋಷಕರಿಗೆ ಹಾಗೂ ಗುರುಗಳಿಗೆ ಕೀರ್ತಿ ತರುವಂತಹ ಕೆಲಸವನ್ನು ಮಾಡಬೇಕು ಎಂದು ಹೇಳಿದರು.ವಿವೇಕಾನಂದ ಆಶ್ರಮ ಸದಸ್ಯ, ಕೌಶಲ್ಯ ತರಬೇತಿದಾರರಾದ ಜೆ.ಸಿ.ರಾಜಶೇಖರ ಅವರು ವಿಶೇಷ ಉಪನ್ಯಾಸ ನೀಡಿ, ನಮ್ಮ ದೇಶವನ್ನು ಕಟ್ಟಬೇಕಾದವರು ನಾವೇ, ದೇಶ ಕಟ್ಟಲು ಸೋಮರಿಗಳಿಂದ, ಮೂರ್ಖರಿಂದ ಸಾಧ್ಯವಿಲ್ಲ, ಸಜ್ಜನಿಕೆಯಿಂದ ಹಾಗೂ ಯುವ ಜನತೆಯಿಂದ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಪ್ರತಿಯೊಬ್ಬರು ವಿವೇಕಾನಂದರ ವಿಚಾರಗಳನ್ನು ಅಧ್ಯಯನ ಮಾಡಬೇಕು. ಬಡವರನ್ನು, ದಲಿತರನ್ನು ಮೇಲಿತ್ತುವ ಕೆಲಸ ಮಾಡಬೇಕು. ಏಳಿ ಎದ್ದೇಳಿ ಕಾರ್ಯನ್ಮುಕರಾಗಿ, ಶ್ರದ್ಧಾವಂತರಾಗಿ ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ ಎಂದರು. ಅದ್ಬುತ ಸಮಯವನ್ನು ಮೊಬೈಲ್‍ನಲ್ಲಿ ಕಳೆಯುವ ಬದಲು ದೇಶ ಕಟ್ಟುವೆಡೆಗೆ ಮುನ್ನುಗ್ಗಿ, ಯಾವುದಕ್ಕೂ ಅಂಜದೇ, ಅಳುಕದೇ ಸಾಧಿಸಿ ಎಂದರು. ಪರರಲ್ಲಿ ನಂಬಿಕೆಯಿಡುವ ಬದಲಾಗಿ ನಿಮ್ಮಲ್ಲಿ ನಂಬಿಕೆ ಇಟ್ಟಾಗ ಮಾತ್ರ ಸಾಧನೆಯ ಶಿಖರಕ್ಕೆ ಏರಬಹುದು ಎಂದು ಹೇಳಿದರು.

     ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ಹೇಮಣ್ಣ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಿರಿ, ಜೀವನದಲ್ಲಿ ಯಶಸ್ಸು ಕಾಣಲು ಸತತ ಪ್ರಯತ್ನ ಅಗತ್ಯ. ಜಾತಿ ಪ್ರಾದೇಶಿಕತೆ ಬಿಟ್ಟು ದೇಶವನ್ನು ಕಟ್ಟಬೇಕು ಎಂದು ಕಿವಿಮಾತು ಹೇಳಿದರು.

   ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಪ್ರಯುಕ್ತ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿ ಅಭಿವೃದ್ಧಿಯ ಸಮಿತಿಯ ಸದಸ್ಯರು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ದೇವಣ್ಣ.ಸಿ ನಿರೂಪಿಸಿದರು. ಪರೀಕ್ಷಾ ನಿಯಂತ್ರಕ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಶ್ರೀನಿವಾಸಮೂರ್ತಿ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link