ಡ್ರಗ್ಸ್ ಪೆಡ್ಲರ್ ಗಳ ಮೇಲೆ ಸಿಸಿಬಿ ದಾಳಿ

ಬೆಂಗಳೂರು

     ಡ್ರಗ್ಸ್ ಪೆಡ್ಲರ್‌ಗಳ ಮೇಲೆ ದಾಳಿ ಮುಂದುವರೆಸಿರುವ ಸಿಸಿಬಿ ಪೊಲೀಸರು ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಅಂತರ ರಾಜ್ಯ ಮಾದಕ ವಸ್ತು ಮಾರಾಟಗಾರ ಸೇರಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ಕಾವಲ್ ಭೈರಸಂದ್ರದ ಬೆಸ್ಕಾಂ ಕಚೇರಿ ಬಳಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಡಿ.ಜೆ. ಹಳ್ಳಿಯ ತಬರೇಶ್ ಪಾಷ (26) ನನ್ನು ಬಂಧಿಸಿ 2 ಲಕ್ಷ ಮೌಲ್ಯದ ಎಂಡಿಎಂಎ ತೂಕದ ಯಂತ್ರ, ಮೊಬೈಲ್, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

      ಆರೋಪಿಯು ನೈಜೀರಿಯನ್‌ನ ಪ್ರಜೆ ವೈಟ್ ಎಂಬಾತನಿಂದ ಎಂಡಿಎಂಎ ಖರೀದಿಸಿ ಮಾರಾಟ ಮಾಡುತ್ತಿದ್ದು ದ್ವಿ ಚಕ್ರ ವಾಹನದಲ್ಲಿ ಆರೋಪಿಯು ಹೋಗುತ್ತಿದ್ದಾಗ ಕಾರ್ಯಚರಣೆ ನಡೆಸಿ ಬಂಧಿಸಲಾಗಿದೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಓರಿಸ್ಸಾದ ಕಂದಮಾಲ್ ನಗರದ ಮಿಥುನ್ ದಿಗಲ್ (21) ನನ್ನು ಬಂಧಿಸಿ 2 ಲಕ್ಷ ಮೌಲ್ಯದ 6 ಕೆ.ಜಿ. 100 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

     ಆರೋಪಿಯು ಓರಿಸ್ಸಾದಿಂದ ಗಾಂಜಾವನ್ನು ರೈಲಿನಲ್ಲಿ ಸಾಗಿಸಿಕೊಂಡು ಬಂದು ನಗರದಲ್ಲಿ ತಮ್ಮ ಸಹಚರರ ಮೂಲಕ ಮಾರಾಟ ಮಾಡುತ್ತಿದ್ದು ಆತನ ಸಹಚರರ ಪತ್ತೆಗೆ ಶೋಧ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link