ಅಧಿಕಾರಿಗಳ ಕಾರ್ಯವೈಖರಿಗೆ ಸಂಸದರ ತೀವ್ರ ಅತೃಪ್ತಿ

ಚಿತ್ರದುರ್ಗ

       ನಾನು ಗುಮಾಸ್ತ ಅಲ್ಲ, ಅಧಿಕಾರಿಗಳಿಗೆ ಬದ್ಧತೆ ಇಲ್ಲ, ಉತ್ತರದಾಯಿತ್ವವೂ ಇಲ್ಲ. ನಾನು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಲು ಆಗಲ್ಲವೆಂದು ಸಂಸದ ಎ.ನಾರಾಯಣ ಸ್ಚಾಮಿ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

      ಜಿಲ್ಲೆಯಲ್ಲಿ ಖಾಸಗಿ ಜಮೀನಿನಲ್ಲಿ ವಾಸವಿರುವ ದಾಖಲೆ ರಹಿತ ಜನ ವಸತಿಗಳ ವಿವರ ಮತ್ತು ಸರ್ಕಾರಿ ಆದೇಶದಂತೆ ರಚನೆ ಆಗಿರುವ ಹೊಸ ಕಂದಾಯ ಗ್ರಾಮಗಳ ರಚನೆ ಪ್ರಗತಿ ಕುರಿತಂತೆ ಸಂಸದ ಎ.ನಾರಾಯಣ ಸ್ಚಾಮಿ ಡಿಸಿ ಕಚೇರಿಯಲ್ಲಿ ಇಂದು ಪ್ರಗತಿ ಪರಿಶೀಲಿಸಿದರು.

      ಹಿರಿಯೂರು, ಚಳ್ಳಕೆರೆ, ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಅಧಿಸೂಚನೆಗೆ ಗಳಿಸಿದ ಬೇಚರಾಕ್ ಗ್ರಾಮಗಳು, ಅಂತಿಮ ಅಧಿಸೂಚನೆ ಕುರಿತಂತೆ ಅಗಿರುವ ಸಾಧನೆ, ಲೋಪದೋಷ ಕುರಿತಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

     ನಾನು ಗುಮಾಸ್ತ ಅಲ್ಲ, ಅಧಿಕಾರಿಗಳಿಗೆ ಬದ್ಧತೆ ಇಲ್ಲ, ಉತ್ತರದಾಯಿತ್ವವೂ ಇಲ್ಲ. ನಾನು ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಲು ಆಗಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ಗ್ರಾಮಗಳ ರಚನೆ ಪ್ರಗತಿ ಗಮನಿಸಿ, ಅರ್ಹರಿಗೆ ಹಕ್ಕು ಪತ್ರ ಕೊಡಿಸುವುದು ಇದು ಜಿಲ್ಲಾಧಿಕಾರಿ ಕೆಲಸ ಎಂದು ಸಭೆಯಲ್ಲಿದ್ದ ಎಡಿಸಿ ಸಿ.ಸಂಗಪ್ಪಗೆ ಸೂಚಿಸಿದರು.

    ಹತ್ತು ಮನೆಗಳಿಗೂ ಅಧಿಕ ಮನೆಗಳಿರುವ ಬೇಚರಾಕ್ ಗ್ರಾಮಗಳ ಪಟ್ಟಿ ಮಾಡಿಡ ವರದಿ ಕೊಡಬೇಕೆಂದು ಎಡಿಎಲ್ ಆರ್ ಹಾಗೂ ಕಂದಾಯ ಅಧಿಕಾರಿಗಳಿಗೆ ತಿಂಗಳ ಒಳಗೆ ಕೊಡ ಬೇಕೆಂದರು. ಇದೇ ವೇಳೆ ಸಂಸದರು ಸಿ ಎಸ್ ಆರ್ ನಿಧಿ ಬಳಕೆ ಕುರಿತು ಚರ್ಚೆ ನಡೆಸಿದರು.

    ಜಿಲ್ಲೆಯಲ್ಲಿ ಈಗಾಗಲೇ 400ಕ್ಕೂ ಹೆಚ್ಚು ಬೇಚರ ಗ್ರಾಮಗಳನ್ನು ಗುರುತಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಈ ಗ್ರಾಮಗಳನ್ನಾಗಿ ಕಂದಾಯ ಗ್ರಾಮಗಳನ್ನಾಗಿಸುವತ್ತ ಶೀಘ್ರ ಕ್ರಮಕೈಗೊಳ್ಳಬೇಕುರಾಜ್ಯದಲ್ಲಿ 2014ಕ್ಕೂ ಮೊದಲು ಬೇಚರ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದರ ಮೂಲಕ ಗ್ರಾಮಗಳ ಅಭಿವೃದ್ಧಿ ಮಾಡುವುದು ಸರ್ಕಾರ ಪ್ರಮುಖ ಉದ್ದೇಶವಾಗಿತ್ತು. ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ಕೇವಲ ಎರಡು ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಜಿಲ್ಲೆಯ 400ಕ್ಕೂ ಬೇಚರ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಲು ಅಧಿಸೂಚನೆಗೆ ಕಳುಹಿಸಲಾಗಿತ್ತು. ಅದರಲ್ಲಿ ಕೇವಲ 80 ಗ್ರಾಮಗಳನ್ನು ಮಾತ್ರ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಿರಿಯೂರು ತಾಲ್ಲೂಕಿನಲ್ಲಿ 84 ಬೇಚರ ಗ್ರಾಮಗಳನ್ನು ಗುರಿತಿಸಿದ್ದು, ಅದರಲ್ಲಿ 35 ಗ್ರಾಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ 23 ಗ್ರಾಮಗಳ ಅನುಮೋದನೆಗೊಂಡಿವೆ.

     ಚಿತ್ರದುರ್ಗ ತಾಲ್ಲೂಕಿನಲ್ಲಿ 68 ಬೇಚರ ಗ್ರಾಮಗಳನ್ನು ಗುರಿತಿಸಿದ್ದು, ಅದರಲ್ಲಿ 47 ಗ್ರಾಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ 37 ಗ್ರಾಮಗಳು ಅನುಮೋದನೆಗೊಂಡಿವೆ. ಚಳ್ಳಕೆರೆ ತಾಲ್ಲೂಕಿನಲ್ಲಿ 41 ಬೇಚರ ಗ್ರಾಮಗಳನ್ನು ಗುರಿತಿಸಿದ್ದು, ಅದರಲ್ಲಿ 23 ಗ್ರಾಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ 3 ಗ್ರಾಮಗಳ ಅನುಮೋದನೆಗೊಂಡಿವೆ. ಹೊಸದುರ್ಗ ತಾಲ್ಲೂಕಿನಲ್ಲಿ 58 ಬೇಚರ ಗ್ರಾಮಗಳನ್ನು ಗುರಿತಿಸಿದ್ದು, ಅದರಲ್ಲಿ 34 ಗ್ರಾಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಸರ್ಕಾರ 24 ಗ್ರಾಮಗಳ ಅನುಮೋದನೆಗೊಂಡಿವೆ.

     ಹೊಳಲ್ಕೆರೆ ತಾಲ್ಲೂಕಿನಲ್ಲಿ 17 ಬೇಚರ ಗ್ರಾಮಗಳನ್ನು ಗುರಿತಿಸಿದ್ದು, ಅದರಲ್ಲಿ 15 ಗ್ರಾಮಗಳ ವರದಿಯನ್ನು ಸರ್ಕಾರಕ್ಕೆ ಪ್ರಾಥಮಿಕ ಅಧಿಸೂಚನೆಗೆ ಸಲ್ಲಿಸಲಾಗಿದ್ದು, ಅದರಲ್ಲಿ 11 ಗ್ರಾಮಗಳು ಅಂತಿಮಗೊಂಡಿವೆ. ಮೊಳಕಾಲ್ಮರು ತಾಲ್ಲೂಕಿನಲ್ಲಿ 11 ಬೇಚರ ಗ್ರಾಮಗಳನ್ನು ಗುರಿತಿಸಿದ್ದು, ಅದರಲ್ಲಿ 8 ಗ್ರಾಮಗಳು ಅಂತಿಮಗೊಂಡಿವೆ. ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಗ್ರಾಮವು ಗ್ರಾಮ ಠಾಣಾ ವ್ಯಾಪ್ತಿಯಲ್ಲಿರಿವುದರ ಕುರಿತು ಮಾಹಿತಿ ಪಡೆದ ಸಂಸದರು ಅದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಹಿರಿಯೂರು 61, ಚಿತ್ರದುರ್ಗ 37, ಚಳ್ಳಕೆರೆ 25, ಹೊಳಲ್ಕೆರೆ 6, ಹೊಸದುರ್ಗ 34 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 3 ಬಾಕಿ ಉಳಿದಿರುವ ಬೇಚರ ಗ್ರಾಮಗಳ ಪ್ರಗತಿ ಪರಿಶೀಲನೆ ಕುರಿತು ಕಾಲಕಾಲಕ್ಕೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಅಂತಿಮ ಅನುಮೋದನೆ ಪಡೆದ ಬೇಚರ ಗ್ರಾಮಗಳ ಗ್ರಾಮ ನಕ್ಷೆ ತಯಾರಾಗಬೇಕು. ಅದರಲ್ಲಿ ಜಾತಿವಾರು, ಮನೆ, ರಸ್ತೆ, ದೇವಸ್ಥಾನ, ಸರ್ಕಾರಿ ಜಮೀನು, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲೆ ಹಾಗೂ ಪ್ರತಿ ವ್ಯಕ್ತಿಯೂ ಹೊಂದಿರುವ ಖಾಸಗಿ ಜಮೀನು ಸೇರಿದಂತೆ ಮುಂತಾದ ಅಂಶಗಳು ನಕ್ಷೆಯಲ್ಲಿ ದಾಖಲಾಗಿರಬೇಕು ಎಂದರು.

      ಈಗಾಗಲೇ ಹೋಬಳಿಗೆ ಎರಡು ಶಾಲೆಗಳಂತೆ ಜಿಲ್ಲೆಯಲ್ಲಿ ಶಾಲೆಗಳ ದುರಸ್ತಿ, ಕಟ್ಟಡ ಕಾಮಗಾರಿ ಕುರಿತಂತೆ ಸಭೆ ನಡೆಸಲಾಗಿದೆ. ಪ್ರಸ್ತುತ ಹೋಬಳಿಗೆ ಒಂದು ಶಾಲೆಯನ್ನು ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಗೊಂಡಿದ್ದು, ಈ ಕಾರ್ಯವನ್ನು ಸಿಎಸ್‍ಆರ್ ಅನುದಾನದಿಂದ ಅಭಿವೃದ್ಧಿ ಪಡಿಸುವ ಕುರಿತು ಚಿಂತನೆ ನಡೆಸಲಾಗಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳ ಸಹಕಾರ ಅಗತ್ಯ ಎಂದರು.

     ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ತಾಲ್ಲೂಕಿಗೆ ಆರು ಶಾಲೆಗಳಂತೆ ಪಟ್ಟಿ ಮಾಡಿ, ಅದರಡಿ ಶಾಲೆಯಲ್ಲಿರುವ ಒಟ್ಟು ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಮಕ್ಕಳ ಸಂಖ್ಯೆ, ಶಾಲೆ ಆರಂಭವಾದ ವರ್ಷ, ಕಾಪೌಂಡ್ ನಿರ್ಮಾಣ, ಶಾಲೆಗಳ ಕೊಠಡಿಗಳ ಅಗತ್ಯತೆ, ಶೌಚಾಲಯ ಸೇರಿದಂತೆ ಆಗಬೇಕಾಗಿರುವ ತುರ್ತು ದುರಸ್ಥಿ ಕಾರ್ಯ ಕುರಿತ ಸಮಗ್ರ ವರದಿ ಸಲ್ಲಿಸುವಂತೆ ಡಿಡಿಪಿಐಗೆ ಸೂಚನೆ ನೀಡಿದರು.

    ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸರ್ಕಾರಿ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜಿಗೆ ಅಗತ್ಯವಿರುವ ಪೀಠೋಪಕರಣ, ಕಾಪೌಂಡ್, ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ ಕುರಿತು ಅಂದಾಜು ಪಟ್ಟಿಯ ವರದಿ ಸಿಎಸ್‍ಆರ್‍ಗೆ ನೀಡುವ ಕುರಿತು ಜಿಲ್ಲಾಧಿಕಾರಿಗಳು ಪತ್ರ ಬರೆಯುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ, ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಡಿಡಿಪಿಐ ಕೆ.ರವಿಶಂಕರ್‍ರೆಡ್ಡಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link