ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕ

ಬಳ್ಳಾರಿ

    ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಶಿವಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಂಡೇ ಬಸಾಪುರ ತಾಂಡದಲ್ಲಿ ನಿಮಿ9ಸಿರುವ ಶುದ್ಧ ಕುಡಿಯುವ ನೀರಿನ ಘಟಕ ಸಂಪೂಣ9 ಕಳಪೆ ಮಟ್ಟದ್ದಾಗಿದ್ದು, ಘಟಕವು ಸ್ಥಗಿತಗೊಂಡ ಪರಿಣಾಮ ಅದು ಈಗ ಅನೈತಿಕ ಹಾಗೂ ದುರ್ವ್ಯೆಸನಿಗಳ ತಾಣವಾಗಿ ಮಾರ್ಪಟ್ಟಿರುವುದರಿಂದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

   ಇದನ್ನರಿತ ಗ್ರಾಮಸ್ಥರು ಮತ್ತು ಸಾರ್ವಜನಿಕರು ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ತಾಂಡಾದ ಪ್ರಜ್ಞಾ ವಂತರು ಒತ್ತಾಯಿಸುತ್ತಿದ್ದಾರೆ.

   ಶುದ್ಧೀಕರಣ ಘಟಕವು ಸರಿಯಾದ ನಿರ್ವಹಣೆ ಕಾಣದೇ ಹಾಗೂ ಕಳಪೆ ಗುಣಮಟ್ಟದ ಯಂತ್ರಗಳನ್ನು ಅಳವಡಿಸಿರುವುದರಿಂದಾಗಿ ಅದು ಒಂದುವರೆ ವರ್ಷಗಳಿಂದಲೂ ಸ್ಥಗಿತವಾಗಿದೆ. ಸಾವ9ಜನಿಕ ನಲ್ಲಿಗಳಲ್ಲಿ ಪೂರೈಕೆಯಾಗುವ ನೀರು ಪೆÇ್ಲೀರೈಡ್ ಯುಕ್ತ ನೀರಾಗಿದ್ದು,ಈ ನೀರನ್ನು ಸೇವನೆ ಹಾಗೂ ಕುಡಿಯುವುದರಿಂದಾಗಿ ತಾಂಡಾದಲ್ಲಿ ಸಾಂಕ್ರಾಮಿಕ ರೋಗಗಳು ತಾಂಡವಾಡುತ್ತಿವೆ. ಹಾಗೂ ವಿವಿದ ಕಾಯಿಲೆಗಳಿಗೆ ತುತ್ತಾಗುವ ದುಸ್ಥಿತಿ ಉಂಟಾಗಿದೆ.

    ಶುದ್ಧ ಕುಡಿಯೋ ನೀರಿಗಾಗಿ ಗ್ರಾಮದ ಜನ ಪರದಾಡುವ ದುಸ್ಥಿತಿ ನಿಮಾ9ಣಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಶುದ್ಧ ಕುಡಿಯುವ ನೀರಿನ ಘಟಕವು ಈಗ ಅಕ್ರಮ ಹಾಗೂ ಅನೈತಿಕ ಹಾಗೂ ದುರ್ವ್ಯೆಸನಿಗಳ ಚಟುವಟಿಕೆ ತಾಣವಾಗಿ ಕಂಡು ಬರುವ ಸಂಗತಿ ಉಂಟು ಅದರ ಪರಿಣಾಮವಾಗಿ ತಾ ಪಂ ಕಾಯ9ನಿವ9ಣಾಧಿಕಾರಿ ಅಥವಾ ತಹಶೀಲ್ದಾರರು ಶೀಘ್ರವೇ ಸ್ಥಳಕ್ಕೆ ಭೇಟಿ ಕೊಟ್ಟು ಸಂಬಂದಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕಾಯ9ಮಾಡಬೇಕಿದೆ.ಮತ್ತು ಘಟಕವು ಮರು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕಿದೆ.

    ಶುದ್ಧ ಕುಡಿಯೋ ನೀರಿನ ಘಟಕ ನಿಮಾ9ಣ ಹಂತದಲ್ಲಿ ಕಳಪೆ ನಡೆದಿದ್ದು,ಭಾರೀ ಅವ್ಯವಹಾರ ಹಗರಣ ಜರುಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇಲಾಖಾ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಸೂಕ್ತ ತನಿಖೆಗೆ ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಮಾಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ. ನಿರ್ಲಕ್ಷಿಸ ವಹಿಸಿದಲ್ಲಿ ನಿರ್ವಹಣೆ ಮಾಡಿರುವವರ ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿ ವರ್ಗದವರ ಮೇಲೆ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಲಾಗುವುದು.

   ತಾ, ಪಂ, ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಸೇವಾಲಾಲ್ ಯುವಕರ ಸಂಘ ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಕನ್ನಡ ಸೇನೆ.ತಾಂಡಾದ ಹಿರಿಯರು ಮಹಿಳೆಯರು ಯುವಕರು,ರೈತಸಂಘದ ಪದಾಧಿಕಾರಿಗಳು ಪ್ರಜಾ ಪಗತಿ ದಿನ ಪತ್ರಿಕೆಯ ಮೂಲಕ ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link