ಪೈಗಂಬರ್ ಬಗೆಗಿನ ವಿವಾದಾತ್ಮಕ ಹೇಳಿಕೆ : ಮಧುಗಿರಿ ಮೋದಿ ಬಂಧನಕ್ಕೆ ಆಗ್ರಹ

ಮಧುಗಿರಿ

    ಇತ್ತೀಚೆಗೆ ಮಹಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿರುವ ಅತುಲ್ ಕುಮಾರ್ ಸಬರ್‍ವಾಲ್ ಅಲಿಯಾಸ್ ಮಧುಗಿರಿ ಮೋದಿಯನ್ನು ಬಂಧಿಸುವಂತೆ ಮಧುಗಿರಿ ಮುಸ್ಲಿಂ ಸಮುದಾಯದವರು ಗುರುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ ನಂದೀಶ್ ರವರಿಗೆ ಮನವಿ ಪತ್ರಸಲ್ಲಿಸಿದರು.

     ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯ ಸಮೀಪ ಸೇರಿದ್ದ ಮುಸ್ಲಿಂ ಮುಖಂಡರು ಮಾತನಾಡಿ, ತುಮಕೂರು ಜಿಲ್ಲೆಯ ಮಧುಗಿರಿಯು ಕೋಮು ಸೌಹಾರ್ದತೆಗೆ ಹೆಸರಾಗಿದೆ. ಸರ್ವ ಜನಾಂಗದವರು ಸಹೋದರರಂತೆ ಇದ್ದೇವೆ. ಶಾಂತಿ ಕದಡಲು ಯತ್ನಿಸುತ್ತಿರುವ ಹಾಗೂ ತಮ್ಮ ಧರ್ಮ ಗುರುವಿನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

   ಈ ಸಂದರ್ಭದಲ್ಲಿ ಜಿಲ್ಲಾ ಎಎಸ್‍ಪಿ ಉದೇಶ್ ಮಾತನಾಡಿ, ಶೀಘ್ರವೇ ಆರೋಪಿಯನ್ನು ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

     ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಅಲೀಂ, ಮೆಕ್ಕಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖುದ್ದೂಸ್, ಮದೀನಾ ಮಸೀದಿ ಉಪಾಧ್ಯಕ್ಷ ಬಾಬ ಫಕೃದ್ದೀನ್ ಶರೀಫ್, ಮಹದೀಯ ಅಧ್ಯಕ್ಷ ಸನಾವುಲ್ಲಾ, ಪುರಸಭಾ ಸದಸ್ಯ ಅಲೀಂ, ಮುಖಂಡರುಗಳಾದ ಜಾಫರ್ ಸಾಧಿಕ್, ಮಹಮದ್ ಅಯ್ಯೂಬ್, ಶಕೀಲ್, ಷಾಜು, ಅಸ್ಲಾಂ ಪಾಷ, ಮಫ್ತಿ ಆಫ್ತಾಬ್, ಎಸ್.ಕೆ. ಸೈಯದ್, ಅಲ್ಲಾಬಕಾμï, ಶಾಮೀರ್ ಅಹಮದ್, ಸೈಯದ್ ನಾಸೀರ್, ಅಸಾದ್‍ವುಲ್ಲಾ, ಖೈದುಲ್ಲಾ, ಆದಿಲ್ ಪಾಷ, ಖಲೀಂವುಲ್ಲಾ, ಕೆ.ಎಸ್.ಅಲೀಂ. ಬಾಬ ವಲೀಖಾನ್, ಶಬ್ಬೀರ್, ಮುಜಾಮಿರ್ ರೆಹಮಾನ್, ಸಲ್ಮಾನ್ ಬೇಗ್, ಹರ್ಷದ್ ಹುಸೇನ್ ಹಾಗೂ ಸಮುದಾಯದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link