ಮುಂಬೈ
ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಕಾರಣಕ್ಕೂ ಸಿಎಎ,ಎನ್‌ಆರ್‌ಸಿ ಹಾಗೂ ಎನ್ ಪಿ ಆರ್ ವಿರುದ್ಧ ನಿರ್ಣಯ ಮಂಡಿಸುವುದಿಲ್ಲ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ತಿಳಿಸಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿಎಎ ಕಾಯ್ದೆಯಿಂದ ಯಾರ ಪೌರತ್ವಕ್ಕೂ ಯಾವುದೇ ದಕ್ಕೆ ಆಗುವುದಿಲ್ಲ. ಯಾರೂ ಬಯಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಹಾ ವಿಕಾಸ್ ಅಗಾಡಿ ಅಡಿ ಮೈತ್ರಿ ಪಕ್ಷಗಳು ಚರ್ಚಿಸಿದ್ದು, ವಿಧಾನಸಭೆಯಲ್ಲಿ ನಿರ್ಣಯ ಮಂಡಿಸದಿರಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಸಿಎಎ ವಿರುದ್ಧ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸುವಂತೆ ನಮ್ಮನ್ನು ಯಾರೂ ಒತ್ತಾಯಿಸಿಲ್ಲ. ಇದೊಂದು ವದಂತಿ ಅಷ್ಟೇ. ಆದರೆ ಹಲವರಿಲ್ಲಿ ಈ ಹೊಸ ಕಾಯ್ದೆ ಬಗ್ಗೆ ಭಯ ಹಾಗೂ ಅಪನಂಬಿಕೆ ಇದೆ. ಇದನ್ನು ಹೋಗಲಾಡಿಸಲು ಜನಜಾಗೃತಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
