ಸಿರುಗುಪ್ಪ:
ನಗರದಲ್ಲಿ ಇದ್ದ ಬಸ್‍ನಿಲ್ದಾಣವನ್ನು ನವೀಕರಿಸುವ ಉದ್ದೇಶದಿಂದ ಕಾಮಗಾರಿ ಕೈಗೊಂಡಿದ್ದು, ಹಲವು ತಿಂಗಳುಗಳೇ ಕಳೆದರೂ ನಿಧಾನಗತಿಯ ಕಾಮಗಾರಿಯಿಂದಾಗಿ ಜನರು ಪರದಾಡುವಂತಾಗಿದೆ.
ವಿವಿಧ ಗ್ರಾಮಗಳಿಂದ ತಾಲೂಕು ಕೇಂದ್ರಗಳಿಗೆ ಬರುವ ಜನರಿಗೆ ಹಾಗೂ ತಾಲೂಕು ಕೇಂದ್ರದಿಂದ ವಿವಿಧ ನಗರ ಪಟ್ಟಣಗಳಿಗೆ ತೆರಳುವ ಜನರಿಗೆ ಹಾಗೂ ಮಹಿಳೆಯರು, ಮಕ್ಕಳು, ವೃದ್ಧರು ಸರಿಯಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇಲ್ಲದೆ, ನಿಂತೇ ಇರುವ ಪರಿಸ್ಥಿತಿ ಇದ್ದು, ಬಸ್ ಬರುವವರೆಗೂ ನಿಂತು ಕಾಯುವ ಶಿಕ್ಷೆ ಅನುಭವಿಸಬೇಕಾಗಿದೆ.
ಕೆಲವರು ನಿಲ್ಲಲು ಆಗದೆ ರಸ್ತೆ ಬದಿಯಲ್ಲಿ ಕುಳಿತುಕೊಂಡು ಬಸ್‍ಗಾಗಿ ಕಾಯಬೇಕಾಗಿದೆ. ಪ್ರಯಾಣಿಕ ಶಿವಕುಮಾರ್ ಮಾತನಾಡಿ ಬಸ್‍ನಿಲ್ದಾಣವನ್ನು ನವೀಕರಿಸುವ ಮುಂಚೆಯೇ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪರ್ಯಾಯ ಬಸ್‍ನಿಲ್ದಾಣದ ವ್ಯವಸ್ಥೆ ಮಾಡದೇ ಇರುವುದರಿಂದ ಜನರಿಗೆ ತುಂಬ ತೊಂದರೆಯಾಗಿದ್ದು, ರಸ್ತೆ ಬದಿಯಲ್ಲಿಯೇ ಬಸ್‍ಗಳು ನಿಲ್ಲುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದ್ದು, ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
ಮಹಿಳೆಯರಿಗೆ ಯಾವುದೇ ಕುಳಿತುಕೊಳ್ಳುವ ಸೌಲಭ್ಯ ಕಲ್ಪಿಸದೇ ಇರುವುದರಿಂದ ರಸ್ತೆ ಬದಿಯಲ್ಲಿ ಹಾಗೂ ನೆರಳು ಇರುವ ಕಡೆಗಳಲ್ಲಿ ಚಿಕ್ಕ ಮಕ್ಕಳನ್ನು ಕೂಡಿಸಿಕೊಂಡು ಬಸ್‍ಗಾಗಿ ಕಾಯುವ ಪರಿಸ್ಥಿತಿ ಇದ್ದು, ಕೂಡಲೇ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ