ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಿ.

ಹೊಸಪೇಟೆ :

         ಹಿಂದುಳಿದ ವರ್ಗಗಳಿಗೆ ಶೇ.35ರಷ್ಟು ಪ್ರಾತಿನಿಧ್ಯ ಹಾಗು ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡುಗಳ ಮರು ವಿಂಗಡಣೆ ಮಾಡುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು.

          ಒಕ್ಕೂಟದ ಜಿಲ್ಲಾಧ್ಯಕ್ಷ ವೈ.ಯಮುನೇಶ್ ಮಾತನಾಡಿ, ನಗರ ಸೇರಿದಂತೆ ಜಿಲ್ಲೆಯ 6 ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ 2019ರ ಮಾರ್ಚ್ ನಲ್ಲಿ ಮುಗಿಯಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. 2011ರ ಜನಗಣತಿಯಂತೆ ನಿಗದಿಪಡಿಸಿರುವ ಜಾತಿವಾರಿ ಮೀಸಲು ಸಮರ್ಪಕವಾಗಿಲ್ಲ. ಈಗಾಗಿ 2015ರಲ್ಲಿ ನ್ಯಾ.ಕಾಂತರಾಜ್ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿವಾರು ಗಣತಿ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳ ಸಮೀಕ್ಷೆಯಂತೆ ಶೇ.35ರಷ್ಟು ನಿಗದಿಗೊಳಿಸಿ, ನಂತರ ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ನಗರ ಹಾಗು ಪಟ್ಟಣ ಪ್ರದೇಶದ ವಾರ್ಡುಗಳಲ್ಲಿ ಶೇ.50ಕ್ಕೂ ಹೆಚ್ಚಿರುವ ಹಿಂದುಳಿದ ವರ್ಗಗಳಿಗೆ ಜನಸಂಖ್ಯೆಗನುಗುಣವಾಗಿ ಮೀಸಲು ನೀಡಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳ ಹಂಚಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಬಳಿಕ ತಹಶೀಲ್ದಾರ್ ಎಚ್.ವಿಶ್ವನಾಥ ಅವರಿಗೆ ಮನವಿ ಸಲ್ಲಿಸಲಾಯಿತು.

           ಒಕ್ಕೂಟದ ತಾಲೂಕು ಅಧ್ಯಕ್ಷ ರವಿಶಂಕರ ದೇವರಮನೆ, ಮುಖಂಡರಾದ ಡಿ.ಚಂದ್ರಶೇಖರ್. ಬಿ.ಕುಮಾರಸ್ವಾಮಿ, ಬಿಸಾಟಿ ಸತ್ಯನಾರಾಯಣ, ರಾಘವೇಂದ್ರ, ಕಬ್ಬೇರ್ ಶ್ರೀನಿವಾಸ, ಕೆ.ಶಿವಾನಂದ, ಟಿ.ಹನುಮಂತ, ಬದ್ರಿನಾಥ, ಅಂಬಣ್ಣ, ಭೋಜರಾಜ, ಸುಭಾಶಚಂದ್ರ, ಶ್ಯಾಮಪ್ಪ ಅಗೋಲಿ ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link