ಶಿರಾ
ನಗರದ ಜ್ಯೋತಿ ನಗರ ಬಡಾವಣೆಯ ಶ್ರೀರಾಮ ದೇವಸ್ಥಾನದ ಮುಂಭಾಗದ 3ನೆ ಅಡ್ಡ ರಸ್ತೆಯನ್ನು ದುರಸ್ಥಿ ಮಾಡುವ ನೆಪದಲ್ಲಿ ಗುತ್ತಿಗೆದಾರರು ಕಿತ್ತು ಹಾಕಿದ್ದು, ಕಳೆದ 6-7 ತಿಂಗಳಿಂದಲೂ ದುರಸ್ಥಿಗೊಳ್ಳದ ಈ ರಸ್ತೆಯನ್ನು ಕೂಡಲೆ ದುರಸ್ಥಿಗೊಳಿಸುವಂತೆ ಬಡಾವಣೆಯ ನಾಗರಿಕರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಶ್ರೀರಾಮ ದೇವಸ್ಥಾನದ ಮುಂಭಾಗದ 3ನೆ ಅಡ್ಡ ರಸ್ತೆಯನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಕಿತ್ತು ಹಾಕಲಾಗಿತ್ತು. ನಂತರ ರಸ್ತೆ ಕಾಮಗಾರಿ ಕೈಗೊಳ್ಳಬೇಕಾದ ಗುತ್ತಿಗೆದಾರರು ಇತ್ತ ಕಡೆ ತಲೆಹಾಕಲೆ ಇಲ್ಲ. ಈ ನಡುವೆ ಚರಂಡಿ ಕಾಮಗಾರಿಯ ಗುತ್ತಿಗೆದಾರರು ಕೂಡ ಇದೇ ರಸ್ತೆಯ ಇಕ್ಕಡೆಗಳನ್ನು ಕಿತ್ತು ಹಾಕಿ ಹೋದವರು ಇತ್ತ ಕಡೆ ಬಂದೆ ಇಲ್ಲ ಎಂದು ಬಡಾವಣೆಯ ನಾಗರಿಕರು ದೂರಿದ್ದಾರೆ.
ಚರಂಡಿಯನ್ನು ಕಿತ್ತು ಹಾಕಿದ ಪರಿಣಾಮ ಒಳ ಚರಂಡಿಯ ನೀರು ಕಟ್ಟಿಕೊಂಡಿದ್ದು ಮನೆಯ ಒಳಗಡೆಯೆ ಕಲುಷಿತ ನೀರು ನಿಲ್ಲುವಂತಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ