ತಿಪಟೂರು :
ತಾಲ್ಲೂಕಿನ ಹೊನವಳ್ಳಿ ರೋಡ್ (ಕೊನೇಹಳ್ಳಿ) ರೈಲ್ವೆ ನಿಲ್ದಾಣದಲ್ಲಿ ವಿಶ್ವಮಾನವ ಎಕ್ಸ್‍ಪ್ರೆಸ್ ರೈಲುಗಾಡಿಗೆ ಗಾಡಿಗೆ ಅಪರಿಚಿತ ಮಹಿಳೆಯೊಬ್ಬಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಮಧ್ಯಾಹ್ನ ಜರುಗಿದೆ .ಮಹಿಳೆಯು ಸುಮಾರು ನಲವತ್ತ ರಿಂದ ನಲವತ್ತೈದು ವರ್ಷ ವಯಸ್ಸಿನವಳಾಗಿದ್ದು ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಲೋಕೊಪೈಲಟ್ ಹೇಳುವ ಪ್ರಕಾರ ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳಲೆಂದೇ ರೈಲು ಬರುವ ಸಮಯದಲ್ಲಿ ರೈಲುಗಾಡಿಗೆ ಅಡ್ಡ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ. ಪ್ರಕರಣ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
