ತುರುವೇಕೆರೆ : ಹಾಡು ಹಗಲೆ ಮನೆಗಳ್ಳತನ

ತುರುವೇಕೆರೆ:

     ಹಾಡು ಹಗಲೇ ಪಟ್ಟಣದಲ್ಲಿನ 2 ಮನೆಗಳ ಬೀಗ ಮುರಿದು ಚನ್ನಾಭರಣ ದೋಚಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.ಪಟ್ಟಣದ ಶಕ್ತಿ ನಗರ ನಿವಾಸಿ ಶಿಕ್ಷಕ ಎಂ.ಬಿ.ಲೇಪಾಕ್ಷಮೂರ್ತಿ ಹಾಗೂ ವಿದ್ಯನಗರ ವಾಸಿ ಖ್ಯಾತ ವಕೀಲ ಡಿ.ಟಿ.ರಾಜಶೇಖರ್ ಎಂಬವರ ಮನೆಯಲ್ಲಿ ಗುರುವಾರ ಚಿನ್ನಾಭರಣಗಳು ಕಳ್ಳತನವಾಗಿದೆ.

    ಶಿಕ್ಷಕರಾದ ಲೇಪಾಕ್ಷಿಮೂರ್ತಿ ಹಾಗೂ ಪತ್ನಿ ಶಿಕ್ಷಕರಾಗಿದ್ದು ಎಂದಿನಂತೆ 9.30ಕ್ಕೆ ಶಾಲೆಗೆ ತೆರಳಿದ್ದಾರೆ ಈ ಸಮಯದಲ್ಲಿ ಕಳ್ಳರು ಮನೆಯ ಕಾಂಪೋಂಡ್ ದಾಟಿ ಹಿಂಬಾಗಿಲನ್ನು ಮುರಿದು ಒಳ ನುಗ್ಗಿ ಬೀರುವಿನ ಬೀಗ ಮುರಿದು 44 ಗ್ರಾಂ ಚಿನ್ನದ ನೆಕ್ಲಸ್, 8 ಗ್ರಾಂ ಚಿನ್ನದ ಬಳೆ, 200 ಗ್ರಾಂ ಬೆಳ್ಳಿ ಸಾಮಾನು ದೋಚಿ ಪರಾರಿಯಾಗಿದ್ದಾರೆ. ವಕೀಲ ಡಿ.ಟಿ. ರಾಜಶೇಖರ್ ಸಹ ಗುರುವಾರ ಬೆಳಿಗ್ಗೆ ಕೋರ್ಟ್‍ಗೆ ತೆರಳಿದ್ದು ಪತ್ನಿ ಮನೆ ಬೀಗ ಹಾಕಿ ಸಂಬದಿಕರ ಕಾರ್ಯಕ್ರಮಕ್ಕೆ ತೆರಳಿದ್ದಾರೆ.

   ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿ 26 ಗ್ರಾಮ್ ಚಿನ್ನದ ಸರ, 6 ಗ್ರಾಮ್ ಓಲೆಯನ್ನು ಕದ್ದು ಪರಾರಿಯಾಗಿದ್ದಾರೆ. ಶಿಕ್ಷಕರು ಹಾಗೂ ವಕೀಲರ ಪತ್ನಿ ಗುರುವಾರ ಸಂಜೆ ಮನೆಗೆ ಆಗಮಿಸಿದ್ದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪಟ್ಟಣದ ಸಿಪಿಐ ಲೋಕೇಶ್, ಬೆರಳಚ್ಚುದಾರ ತಜ್ಞರಾದ ಜಗದೀಶ್, ಕಾಂತರಾಜು ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

    ಪಟ್ಟಣದ ಜನತೆ ಆತಂಕ: ಪಟ್ಟಣದಲ್ಲಿ ಹಾಡಗಲೆ ಕಳ್ಳತನ ನಡೆಯುತ್ತಿದ್ದು ಅದರಲ್ಲೂ ಬೀಗ ಹಾಕಿದ ಮನೆಗಳನ್ನು ಕಳ್ಳರು ನೇರ ಗುರಿಯಾಗಿಸಿಕೊಂಡು ಕಳ್ಳತನ ಎಸಗುತ್ತಿದ್ದಾರೆ. ಬಹುಪಾಲು ನೌಕರರು ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳುತ್ತಾರೆ. ಆ ವೇಳೆ ಮನೆಯಲ್ಲಿ ಕಳ್ಳತನ ನಡೆದರೆ ಹೇಗೆಂದು ಆತಂಕಗೊಂಡಿದ್ದಾರೆ. ತುರುವೇಕೆರೆ: ಹಾಡು ಹಗಲೇ ಪಟ್ಟಣದಲ್ಲಿನ 2 ಮನೆಗಳ ಬೀಗ ಮುರಿದು ಚನ್ನಾಭರಣ ದೋಚಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

    ಪಟ್ಟಣದ ಶಕ್ತಿ ನಗರ ನಿವಾಸಿ ಶಿಕ್ಷಕ ಎಂ.ಬಿ.ಲೇಪಾಕ್ಷಮೂರ್ತಿ ಹಾಗೂ ವಿದ್ಯನಗರ ವಾಸಿ ಖ್ಯಾತ ವಕೀಲ ಡಿ.ಟಿ.ರಾಜಶೇಖರ್ ಎಂಬವರ ಮನೆಯಲ್ಲಿ ಗುರುವಾರ ಚಿನ್ನಾಭರಣಗಳು ಕಳ್ಳತನವಾಗಿದೆ. ಶಿಕ್ಷಕರಾದ ಲೇಪಾಕ್ಷಿಮೂರ್ತಿ ಹಾಗೂ ಪತ್ನಿ ಶಿಕ್ಷಕರಾಗಿದ್ದು ಎಂದಿನಂತೆ 9.30ಕ್ಕೆ ಶಾಲೆಗೆ ತೆರಳಿದ್ದಾರೆ ಈ ಸಮಯದಲ್ಲಿ ಕಳ್ಳರು ಮನೆಯ ಕಾಂಪೋಂಡ್ ದಾಟಿ ಹಿಂಬಾಗಿಲನ್ನು ಮುರಿದು ಒಳ ನುಗ್ಗಿ ಬೀರುವಿನ ಬೀಗ ಮುರಿದು 44 ಗ್ರಾಂ ಚಿನ್ನದ ನೆಕ್ಲಸ್, 8 ಗ್ರಾಂ ಚಿನ್ನದ ಬಳೆ, 200 ಗ್ರಾಂ ಬೆಳ್ಳಿ ಸಾಮಾನು ದೋಚಿ ಪರಾರಿಯಾಗಿದ್ದಾರೆ. ವಕೀಲ ಡಿ.ಟಿ. ರಾಜಶೇಖರ್ ಸಹ ಗುರುವಾರ ಬೆಳಿಗ್ಗೆ ಕೋರ್ಟ್‍ಗೆ ತೆರಳಿದ್ದು ಪತ್ನಿ ಮನೆ ಬೀಗ ಹಾಕಿ ಸಂಬದಿಕರ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಕಳ್ಳರು ಮನೆಯ ಹಿಂಬಾಗಿಲನ್ನು ಮುರಿದು ಒಳ ನುಗ್ಗಿ 26 ಗ್ರಾಮ್ ಚಿನ್ನದ ಸರ, 6 ಗ್ರಾಮ್ ಓಲೆಯನ್ನು ಕದ್ದು ಪರಾರಿಯಾಗಿದ್ದಾರೆ.

    ಶಿಕ್ಷಕರು ಹಾಗೂ ವಕೀಲರ ಪತ್ನಿ ಗುರುವಾರ ಸಂಜೆ ಮನೆಗೆ ಆಗಮಿಸಿದ್ದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಪಟ್ಟಣದ ಸಿಪಿಐ ಲೋಕೇಶ್, ಬೆರಳಚ್ಚುದಾರ ತಜ್ಞರಾದ ಜಗದೀಶ್, ಕಾಂತರಾಜು ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

   ಪಟ್ಟಣದ ಜನತೆ ಆತಂಕ: ಪಟ್ಟಣದಲ್ಲಿ ಹಾಡಗಲೆ ಕಳ್ಳತನ ನಡೆಯುತ್ತಿದ್ದು ಅದರಲ್ಲೂ ಬೀಗ ಹಾಕಿದ ಮನೆಗಳನ್ನು ಕಳ್ಳರು ನೇರ ಗುರಿಯಾಗಿಸಿಕೊಂಡು ಕಳ್ಳತನ ಎಸಗುತ್ತಿದ್ದಾರೆ. ಬಹುಪಾಲು ನೌಕರರು ಬೆಳಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳುತ್ತಾರೆ. ಆ ವೇಳೆ ಮನೆಯಲ್ಲಿ ಕಳ್ಳತನ ನಡೆದರೆ ಹೇಗೆಂದು ಆತಂಕಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link