ಬೆಂಗಳೂರು
ರಾಜ್ಯದ ಜನತೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ತಿಳಿದ ತಕ್ಷಣ ಸಹಾಯ ಹಸ್ತ ನೀಡುವಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಮುಂಚೂಣಿಯಲ್ಲಿರುತ್ತಾರೆ.ಈಗ ರಾಜ್ಯವೇ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಎದುರಿಸುತ್ತಿದ್ದು, ಇದನ್ನು ಹೊಡೆದೋಡಿಸಲು ಸುಧಾ ಮೂರ್ತಿ ಕೈಜೋಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಡಳಿತದ ಮನವಿ ಮೇರೆಗೆ ಕೊರೊನಾ ಚಿಕಿತ್ಸೆಗಾಗಿ ಸುಧಾ ಮೂರ್ತಿ ಅವರು ಸುಮಾರು 28 ಲಕ್ಷ ರೂಪಾಯಿ ಮೊತ್ತದ ವೈದ್ಯಕೀಯ ಸಲಕರಣೆಗಳನ್ನು ರವಾನಿಸಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಮಂಗಳೂರು ಪೊಲೀಸ್ ಕಮಿಷನರ್ ಹರ್ಷಾ, ಜಿಲ್ಲಾಡಳಿತದ ವತಿಯಿಂದ ಮಂಗಳೂರು ಪೊಲೀಸರು ಮಾಡಿದ ಕರೆಗೆ ಸುಧಾಮೂರ್ತಿಯವರು ಸ್ಪಂದಿಸಿದ್ದು, 36 ಗಂಟೆಯೊಳಗೆ ವೈದ್ಯಕೀಯ ಸಲಕರಣೆಗಳು ಮಂಗಳೂರಿಗೆ ತಲುಪಿವೆ ಎಂದು ತಿಳಿಸಿದ್ದಾರೆ.
ಸುಧಾಮೂರ್ತಿ ಹಾಗೂ ಇನ್ಫೋಸಿಸ್ ಸಂಸ್ಥಾನದ ಶ್ರೀ ರಾಮದಾಸ್ ಕಾಮತ್ ಹಾಗೂ ತಂಡಕ್ಕೆ ಹರ್ಷಾ ಅವರು ಧನ್ಯವಾದ ಅರ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ