ಹುಳಿಯಾರು:
ಹುಳಿಯಾರಿನ ವಾಸವಿ ಶಾಲೆಯ ಮುಂಭಾಗದ ರಸ್ತೆಗೆ ಮನೆಗಳ ಚರಂಡಿ ನೀರು ಹರಿಯುತ್ತಿದ್ದರೂ ಪಪಂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಿಸಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇಲ್ಲಿನ ಚರಂಡಿ ಕಾಲಕಾಲಕ್ಕೆ ಕ್ಲೀನ್ ಮಾಡದ ಪರಿಣಾಮ ಚರಂಡಿ ಬ್ಲಾಕಾಗಿ ಕಳೆದ ಐದಾರು ತಿಂಗಳಿಂದ ರಸ್ತೆಯಲ್ಲಿ ಮನೆಗಳ ಕೊಳಚೆ ನೀರು ನಿಲ್ಲುತ್ತಿದೆ.
ಪರಿಣಾಮ ಶಾಲೆಗೆ ಬರುವ ವಿದ್ಯಾರ್ಥಿಗಳು, ಇಲ್ಲಿನ ನಿವಾಸಿಗಳು, ದಾರಿಹೋಕರು ಈ ಕೊಚ್ಚೆಯಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ. ಆದರೂ ಸಹ ಕೊಳಚೆ ನೀರು ಬಿಟ್ಟಿರುವ ಮನೆಗಳವರು ಸಹ ಇದು ನಮ್ಮದಲ್ಲ ವೇನೋ ಎಂಬಂತೆ ನಿರುಮ್ಮಳರಾಗಿದ್ದಾರೆ.
ಇದನ್ನು ಗಮನಿಸಿದಲ್ಲಿ ಇವರ್ಯಾರಿಗೂ ಸಾಮಾಜಿಕ ಜವಾಬ್ದಾರಿ ಇಲ್ಲವೇ ಎನ್ನುವ ಪ್ರಶ್ನೆ ಕಾಡುತ್ತದೆ. ಮನೆಯಲ್ಲಿನ ನೀರು ಹರಿಯುವ ಚರಂಡಿ ಬ್ಲಾಕ್ ಆಗಿದ್ದಲ್ಲಿ ಕ್ಲೀನ್ ಮಾಡಿಸುವ ಜವಾಬ್ದಾರಿ ಮನೆಯವರದ್ದೂ ಆಗಿರುತ್ತದೆ. ಅವರನ್ನು ಪ್ರಶ್ನಿಸಿದರೆ ಇದು ಪಂಚಾಯಿತಿಯವರು ಮಾಡಬೇಕಾಗಿರುವ ಕೆಲಸ. ಅವರು ಮಾಡದಿದ್ದಲ್ಲಿ ನಾವೇನು ಮಾಡಲಿಕ್ಕಾಗುತ್ತದೆ ಎಂಬಂತೆ ಉತ್ತರ ನೀಡುತ್ತಾರೆ. ಇನ್ನು ಪಂಚಾಯ್ತಿಯರಿಗೆ ಈ ಬಗ್ಗೆ ಅನೇಕ ಬಾರಿ ದೂರು ನೀಡಿದ್ದರೂ ನಿರ್ಲಕ್ಷ್ಯಿಸಿದ್ದಾರೆ
ಇನ್ನಾದರೂ ಮನೆಯವರಾಗಲಿ, ಪಪಂ ಅಧಿಕಾರಿಗಳಾಗಲಿ ಚರಂಡಿ ನೀರನ್ನು ರಸ್ತೆಯಲ್ಲಿ ಹರಿಯುವುದನ್ನು ನಿಲ್ಲಿಸಿ ರಸ್ತೆಯಲ್ಲಿ ನೆಮ್ಮದಿಯಾಗಿ ಓಡಾಡಲು ಅವಕಾಶ ಕಲ್ಪಿಸಲು ಮುಂದಾಗುವಂತೆ ವಸಂತ ನಗರ ಬಡಾವಣೆಯ ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ