ಸೋಂಕು ನಿವಾರಕ ಮಾರ್ಗ ಉದ್ಘಾಟಿಸಿದ ಡಿಸಿ ಬೀಳಗಿ

ದಾವಣಗೆರೆ

      ಜನರಿಂದ ಜನರಿಗೆ ಹರಡುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿರ್ಮಿಸಲಾಗಿರುವ ಸೋಂಕು ನಿವಾರಕ ಮಾರ್ಗವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಶುಕ್ರವಾರ ಲೋಕಾರ್ಪಣೆ ಮಾಡಿದರು.ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ರಕ್ಷಣೆಗಾಗಿ ಸೋಂಕು ನಿವಾರಕ ಮಾರ್ಗ ಸ್ಥಾಪಿಸಲಾಗಿದ್ದು, ಈ ಮಾರ್ಗದಲ್ಲಿ ಸಾಗುವ ಜನರ ಮೇಲೆ ಸೋಂಕು ನಿವಾರಕ ದ್ರಾವಣ ಸಿಂಪರಣೆ ಆಗಲಿದೆ. ಹೀಗಾಗುವುದರಿಂದ ಮನುಷ್ಯನ ದೇಹದ ಮೇಲಿರುವ ವೈರಾಣುಗಳು ನಾಶವಾಗಲಿದೆ.

      ಕೊರೊನಾ ಹಿನ್ನೆಲೆಯಲ್ಲಿ ಕೇವಲ ಕೈಗಳನ್ನು ಮಾತ್ರ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಸೋಂಕು ನಿವಾರಕ ಮಾರ್ಗದಲ್ಲಿ ಇಡೀ ದೇಹ ಸ್ವಚ್ಛಗೊಳ್ಳುತ್ತದೆ. ರಾಜ್ಯದ ಹಲವೆಡೆ ಈಗಾಗಲೇ ಈ ರೀತಿಯ ಸೋಂಕು ನಿವಾರಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ. ನೀರಿನಲ್ಲಿ ಹೈಡ್ರಾಕ್ಸಿಕ್ ಗ್ಲೋಕೋನೇಟ್ ಹಾಗೂ ಸಿಟ್ರಿಕ್ ಬೆರೆಸಿ ದ್ರಾವಣ ರೆಡಿ ಮಾಡಲಾಗಿದೆ. ಇದು ಡೆಟಾಲ್‍ನಲ್ಲಿಯೂ ಬಳಕೆಯಾಗುತ್ತದೆ.

      ಈ ಕುರಿತು ಮಾತನಾಡಿದ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಒಂದು ಸಾವಿರ ಲೀಟರ್‍ನ ಟ್ಯಾಂಕ್‍ನಲ್ಲಿ ಡಿಸಿನೆಧಿಕ್ಟೆಂಟ್ (ಸೋಂಕು ನಿವಾರಕ) ತುಂಬಲಾಗಿದೆ. ಅದು ಸ್ಪಿಂಕ್ಲರ್ ಮೂಲಕ ಸೋಂಕು ನಿವಾರಕ ಜನರ ಮೇಲೆ ಸಿಂಪಡಣೆಯಾಗಲಿದೆ. ಎರಡು ಗಂಟೆಗಳ ಕಾಲ ಒಂದು ಟ್ಯಾಂಕ್‍ನಲ್ಲಿ ಇರುವ ದ್ರಾವಣ ಸಿಂಪರಣೆ ಮಾಡಬಹುದು. ಬೆಳಗಿನ ಸಂದರ್ಭದಲ್ಲಿ ಜನಸಂದಣೆ ಹೆಚ್ಚು ಇರುವುದರಿಂದ ದ್ರಾವಣ ಬೇಗ ಬಳಕೆಯಾಗುತ್ತದೆ. ನಂತರ ಅಷ್ಟಾಗಿ ದ್ರವ ಬಳಕೆಯಾಗುವುದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ದ್ರಾವಣ ನಿರಂತರವಾಗಿ ತುಂಬಲಾಗುವುದು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮೇಯರ್ ಬಿ.ಜಿ.ಅಜಯ್‍ಕುಮಾರ್, ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link