ಬಳ್ಳಾರಿ:
ಕೂಡ್ಲಿಗಿ ತಾಲೂಕಿನ ಹುಡೇಂ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಪಂ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಂತರ ಕಾನಹೊಸಹಳ್ಳಿ ಠಾಣೆ ಪಿಎಸ್ಐ ನಾಗರಾಜ್ ಅವರು ಆಗಮಿಸಿ ಕರೋನಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಗ್ರಾಮಗಳಲ್ಲಿ ಲಾಕ್ಡೌನ್ ಆದೇಶವನ್ನು ಪಾಲಿಸಬೇಕು. ಯಾರಾದರೂ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷರಾದ ಪಿ.ಮಂಜುನಾಥ, ತಾಲೂಕು ಪಂಚಾಯಿತಿ ಸದಸ್ಯರಾದ ಹುಡೇಂ ಜಿ.ಪಾಪನಾಯಕ, ನೋಡಲ್ ಅಧಿಕಾರಿಯಾದ ಪಂಪಾಪತಿ, ಗ್ರಾಪಂ ಸದಸ್ಯರಾದ ರಸೂಲ್ ಸಾಬ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ.ಮಾರುತಿ, ಮುಖಂಡರಾದ ಚೌಟಯ್ಯನಹಟ್ಟಿ ಈಶ್ವರಪ್ಪ, ವಕೀಲರಾದ ಜಿ.ಗುರುಮೂರ್ತಿ, ಕರುನಾಡು ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಹುಡೇಂ ಕೃಷ್ಣಮೂರ್ತಿ, ಗ್ರಾಪಂ ಬಿಲ್ ಕಲೆಕ್ಟರ್ ತಿಪ್ಪೇರುದ್ರಪ್ಪ, ಕಂಪ್ಯೂಟರ್ ಆಪರೇಟರ್ ತಿಪ್ಪೇಸ್ವಾಮಿ, ಎಎನ್ ಎಂ ಪ್ರೇಮಾ, ಆಶಾ ಕಾರ್ಯಕರ್ತೆಯರಾದ ಹುಡೇಂ ಕರಿಬಸಮ್ಮ, ನಾಗಮ್ಮ, ತಾಯಕನಹಳ್ಳಿ ಚೌಡಮ್ಮ, ಯಶೋದಮ್ಮ, ಲಕ್ಷ್ಮಿದೇವಿ, ನಡುವಲಹಟ್ಟಿ ತಿಪ್ಪಮ್ಮ, ಸುಟ್ಟಕರ್ನಾರಹಟ್ಟಿ ನಾಗವೇಣಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ