ಸರ್ಕಾರಗಳ ಮಾರ್ಗ ಸೂಚಿ ಚಾಚು ತಪ್ಪದೆ ಪರಿಪಾಲನೆ : ತಹಸೀಲ್ದಾರ್

ಕುಣಿಗಲ್

    ತಾಲ್ಲೂಕು ಆಡಳಿತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗ ಸೂಚಿಯನ್ನು ಚಾಚು ತಪ್ಪದೆ ಪರಿಪಾಲನೆ ಮಾಡುತ್ತಿದೆ. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ವೈರಸ್ ತಡೆಗಟ್ಟಲು ಕಟ್ಟುನಿಟ್ಟಿನ ಲಾಕ್‍ಡೌನ್ ಮಾಡುವ ಮೂಲಕ ಆರು ಹೋಬಳಿಯಲ್ಲು ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡವನ್ನ ರಚಿಸಲಾಗಿದೆ ಎಂದು ತಹಸೀಲ್ದಾರ್ ವಿ.ಆರ್.ವಿಶ್ವನಾಥ್ ತಿಳಿಸಿದರು.

    ತಾ.ಪಂ.ಸಭಾಗಂಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ,ಕುಣಿಗಲ್ ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಲಾಕ್‍ಡೌನ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು,ಸಾರ್ವಜನಿಕರು,ರೈತರು ಸಹಕಾರ ನೀಡಿದ್ದಾರೆ. 6 ಹೋಬಳಿಗಳಲ್ಲೂ ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡಗಳನ್ನ ರಚಿಸಲಾಗಿದ್ದು,ದಿನದ 24 ಘಂಟೆಗಳು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಾ ಯಾವುದೇ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳುತ್ತ ಅಗತ್ಯವಸ್ತುಗಳ ಅಂಗಡಿಗಳು, ನ್ಯಾಯಬೆಲೆ ಅಂಗಡಿ ಸೇರಿದಂತೆ ಕಾರ್ಯ ನಿರ್ವಹಿಸಿವೆ.

      ತಾಲ್ಲೂಕಿನಾದ್ಯಂತ ಇಲ್ಲಿಯವರೆಗೂ 40 ಪ್ರಕರಣಗಳು ದಾಖಲಾಗಿದ್ದು,ಯಾವುದೇ ರೋಗವು ಪತ್ತೆಯಾಗಿರುವುದಿಲ್ಲ. ಬೇರೆ ಬೇರೆ ಜಿಲ್ಲೆಯ 180 ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ಬಂದಿದ್ದವರಿಗೆ ಮೊರಾರ್ಜಿ ವಸತಿ ಶಾಲೆಗಳಲ್ಲಿ ಊಟ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ.ಜೊತೆಗೆ ತಾಲ್ಲೂಕು ಆಡಳಿತವೂ 40 ಕುಟುಂಬಗಳಿಗೆ ತಾಲ್ಲೂಕು ಆಡಳಿತದಿಂದ ರೇಷನ್ ಕಿಟ್ ವಿತರಣೆ ಮಾಡಲಾಗಿದೆ ಯಾವುದೇ ಸಮಸ್ಯೆ ಇದ್ದರೆ ಸಹಾಯವಾಣಿಗೆ ಕರೆ ಮಾಡುವುದು.ತಾಲ್ಲೂಕು ಕಛೇರಿಯಲ್ಲಿ 08132-220239 ಸಹಾಯವಾಣಿ ಸಂಖ್ಯೆ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ ಎಂದರು.

     ಇಓ ಶಿವರಾಜಯ್ಯ ಮಾತನಾಡಿ ಕುಡಿಯುವ ನೀರಿಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಒತ್ತುಕೊಡಲಾಗಿದೆ ಯಾವುದೇ ಕುಡಿಯುವ ನೀರಿಗೆ ಆತಂಕ ಇಲ್ಲದಂತೆ ಆದ್ಯತೆ ಮೇರೆಗೆ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ವಾರಿಯರ್ಸ್‍ಗಳಾದ ವೈದ್ಯರು ಪೊಲೀಸರಂತೆ ನಿತ್ಯ ಸಮಾಜದ ಒಳಿತಿಗಾಗಿ ದುಡಿಯುವ ಪತ್ರಕರ್ತರನ್ನು ತಾಲ್ಲುಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಪತ್ರಕರ್ತರಿಗೆ ಆರೋಗ್ಯ ತಪಾಸಣೆ ನಡೆಸಿ, ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಇಓ ಶಿವರಾಜಯ್ಯ, ಸಿಪಿಐ ನಿರಂಜನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ರಮೇಶ್,ತಾಲ್ಲೂಕು ವೈದ್ಯಾಧಿಕಾರಿ ಡಾ ಜಗದೀಶ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link