ಮುಂಬೈ:
ಒಂದು ಸಮುದಾಯದ ಸದಸ್ಯರನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿರುವ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ರಾನಾವತ್ ವಿರುದ್ಧ ಕೇಸು ದಾಖಲಾಗಿದೆ.ತಮ್ಮ ಸಹೋದರಿ ರಂಗೋಲಿ ಚಂಡೆಲ್ ಅವರಿಗೆ ಬೆಂಬಲವಾಗಿ ಮಾತನಾಡಿರುವ ವಿಡಿಯೊವೊಂದನ್ನು ಕಂಗನಾ ರಾನಾವತ್ ಬಿಡುಗಡೆ ಮಾಡಿದ್ದರು.
ಅದರಲ್ಲಿ ನಿರ್ದಿಷ್ಟ ಸಮುದಾಯವನ್ನು ಭಯೋತ್ಪಾದಕರು ಎಂದು ಸಂಬೋಧಿಸಿದ್ದರು ಎಂದು ಅಲಿ ಕಶಿಫ್ ಖಾನ್ ದೇಶ್ ಮುಖ್ ಎಂಬ ವಕೀಲರು ಮುಂಬೈಯ ಅಂಬೊಲಿ ಉಪನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.ದ್ವೇಷದ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ರಂಗೋಲಿ ಚಂಡೆಲ್ ಅವರ ಟ್ವಿಟ್ಟರ್ ಅಕೌಂಡ್ ರದ್ದಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
