ಪ್ರತ್ಯೇಕ ಲಿಂಗಾಯತ ಧರ್ಮ : ನಾಯಕರಲ್ಲಿ ಪರ ವಿರೋಧ ಅಭಿಪ್ರಾಯ

ಬೆಳಗಾವಿ

         ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕೃತ ವಿಚಾರ ಬಗ್ಗೆ ರಾಜಕೀಯ ನಾಯಕರಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ..ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಲಿಂಗಾಯತ ಮತ್ತು ವೀರಶೈವ ಹಿಂದು ಧರ್ಮವೇ ಆಗಿತ್ತು..ಆದ್ರೆ ಕಾಂಗ್ರೆಸ್ ಸರ್ಕಾರ ರಾಜಕೀಯಕ್ಕಾಗಿ ಧರ್ಮ ಒಡೆಯುವ ತಪ್ಪು ನಿರ್ಧಾರ ಕೈಗೊಂಡಿತ್ತು.

          ಇದು ಎಲ್ಲರಿಗು ತಿಳಿದಿದ್ರು..ಏಕಪಕ್ಷೀಯ ತೀರ್ಮಾನ ಕೈಗೊಳ್ಳುವ ಮೂಲಕ ಸಿದ್ದರಾಮಯ್ಯ ಪ್ರತ್ಯೇಕ ಲಿಂಗಾಯತ ಸ್ಥಾನಮಾನಕ್ಕೆ ಕೇಂದ್ರಕ್ಕೆ ಶಿಫಾರಸ್ಸು ಮಾಡಿದನ್ನು ಅಲ್ಪಸಂಖ್ಯಾತ ಇಲಾಖೆ ತಿರಸ್ಕರಿಸಿದೆ ಎಂದು ಬಿಎಸ್ ವೈ ತಿರುಗೇಟು ನೀಡಿದ್ರ..ಈ ಬಗ್ಗೆ ಹೇಳಿಕೆ ನೀಡದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಅಥವಾ ವಿರೋಧವಾಗಿ ನಾನಿಲ್ಲ..ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಿದ್ದರೆ ಅನುಕೂಲವಾಗುತ್ತಿತ್ತು..ವೀರಶೈವ ಮತ್ತು ಲಿಂಗಾಯತ ಎರಡು ಒಂದೆಯಾಗಿದೆ.ಕೇಂದ್ರದ ತೀರ್ಮಾನದ ಬಗ್ಗೆ ಮಾಹಿತಿಯಿಲ್ಕವೆಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ