ಹುಳಿಯಾರು
ರಂಜ್ಹಾನ್ ಆಚರಣೆ ವೇಳೆ ಮುಸ್ಲಿಮರು ಗುಂಪುಗೂಡಬಾರದು ಮತ್ತು ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಮಾಡಬಾರದು ಎಂದು ಹುಳಿಯಾರಿನ ಪಿಎಸೈ ರಮೇಶ್ ಸೂಚನೆ ನೀಡಿದರು.ಹುಳಿಯಾರಿನ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ವಿಶ್ವದಲ್ಲಿ ಕೋವಿಡ್-19 ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇದು ಹರಡುವುದನ್ನು ತಡೆಯಲು ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಎಲ್ಲರೂ ಇದನ್ನು ಪಾಲಿಸ ಬೇಕು ಎಂದು ಮನವಿ ಮಾಡಿದರು.
‘ರಂಜ್ಹಾನ್’ನಲ್ಲಿ ಪ್ರತಿದಿನದ ಉಪವಾಸ ಆರಂಭ ಮತ್ತು ಅಂತ್ಯವನ್ನು ಮೈಕ್ನಲ್ಲಿ ಕಡಿಮೆ ತೀವ್ರತೆ ಧ್ವನಿಯಲ್ಲಿ ತಿಳಿಸಲು ಮಸೀದಿಯವರಿಗೆ ಅವಕಾಶವಿದೆ. ಮಸೀದಿಯಲ್ಲಿ ಮೂವರು ಸಿಬ್ಬಂದಿ ಹೊರತುಪಡಿಸಿ, ಹೆಚ್ಚಿನ ಮಂದಿ ಪ್ರಾರ್ಥನೆ ಸಲ್ಲಿಸುವಂತಿಲ್ಲ. ಸಾಮೂಹಿಕ ಇಫ್ತಾರ್ ಕೂಟ ನಡೆಸುವಂತಿಲ್ಲ. ಹಬ್ಬದ ಆಚರಣೆಗೆ ಹೊರಗಿನವರಿಗೆ ಅವಕಾಶ ಕೊಡಬೇಡಿ ಮತ್ತು ನೀವೂ ಬೇರೆಡೆ ಹೋಗಬೇಡಿ ಎಂದು ಸಲಹೆ ನೀಡಿದರು.
ಜಹೀರ್ ಸಾಬ್, ಇಸ್ಮಾಯಿಲ್ ಸಾಬ್, ಫಯಾಜ್, ಸಾಹೇಬ್, ಹೌಸಿ, ವೈ.ಎಸ್.ಪಾಳ್ಯದ ಆಲಂ, ಫಯಾಜ್, ಮಹಿದೀನ್ಶಾ, ಅಲ್ಲಾ ಉಮ್ಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
