ಕೊಟ್ಟೂರು
ಪಟ್ಟಣದ ಯುವಕನಿಗ ಕರೋನಾ ತಗುಲಿರುವುದು ಶನಿವಾರ ಖಾತರಿಯಾಗಿದೆ. ಈ ಪ್ರಕರಣದಿಂದಾಗಿ ಕೊಟ್ಟೂರಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ 5ಕ್ಕೇರಿದಂತಾಗಿದೆ.ಇಲ್ಲಿನ ವಿದ್ಯಾನಗರ ಬಡಾವಣೆಯ ತುಂಗಾಭದ್ರ ಬಿ.ಪಿ.ಇಡಿ ಕಾಲೇಜಿನ ಎದುರಿಗಿರುವ ಮೂಗಬಸವೇಶ್ವರ ಆಸ್ಪತ್ರೆ ಹಿಂಭಾಗದ ಮನೆಯಲ್ಲಿ ವಾಸವಾಗಿದ್ದ 20 ವರ್ಷದ ಯುವಕನಿಗೆ ಕರೋನಾ ಪಾಸಿಟಿವ್ ಕಂಡುಬಂದಿದೆ.
ಯುವಕನು ಸಂಬಂದಿಯಾದ ಕೂಡ್ಲಿಗಿ ತಾಲೂಕಿನ ಲೋಕಿಕೆರೆಯ ಪುರುಷನೊಂದಿಗೆ ಇಲ್ಲಿನ ಸಮುದಾಯ ಆಸ್ಪತ್ರೆಗೆ ಲೋಕಿಕೆರೆ ಯುವಕನ ಪರೀಕ್ಷೆ ಮಾಡಿಸಲೆಂದು ಬಂದಿದ್ದನು. ಲೋಕಿಕೆರೆಯ ಪುರುಷನಿಗೆ ಪಾಸಿಟಿವ್ ಬಂದಿತ್ತೆಂದು ನಂತರ ಗೊತ್ತಾಗಿ ಈತ ಜೂನ್ 25 ರಂದು ತನ್ನ ಗಂಟಲು ದ್ರವ ಮಾದರಿಯ ಪರೀಕ್ಷೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಳಗಾಗಿದ್ದ. ಗಂಟಲು ದ್ರವದ ಪರೀಕ್ಷೆ ಯಲ್ಲಿ ಶನಿವಾರ ಪಾಸಿಟಿವ್ ಇರುವುದು ಕಂಡುಬಂದಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಕೊಟ್ಟೂರು ತಾಲೂಕು ಆಡಳಿತ ಕೂಡಲೇ ಅಂಬುಲೆನ್ಸ್ನ್ನು ಯುವಕನು ವಾಸವಾಗಿದ್ದ ಮನೆಗೆ ಕಳುಹಿಸಿ ಆತನನ್ನು ಕೋವಿಡ್ ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಶನಿವಾರ ಮಧ್ಯಾಹ್ನ ಕಳುಹಿಸಿಕೊಡಲಾಯಿತು.
ತಹಶೀಲ್ದಾರ್ ಜಿ.ಅನಿಲ್ಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾ„ಕಾರಿ ಹೆಚ್.ಎಫ್.ಬಿದರಿ, ಡಾ.ಪೃಥ್ವಿ, ಆರೋಗ್ಯ ನಿರೀಕ್ಷಕಿ ಅನುಷಾ, ಸಬ್ ಇನ್ಸ್ಪೆಕ್ಟರ್ ಕಾಳಿಂಗ ಮತ್ತಿತರ ಅ„ಕಾರಿಗಳು ಸ್ಥಳಕ್ಕೆ ಆಗಮಿಸಿ ಯುವಕ ವಾಸವಾಗಿದ್ದ ಪಕ್ಕದ ಐದು ಮನೆಗಳ ವ್ಯಾಪ್ತಿಯುದ್ದಕ್ಕೂ ಸೀಲ್ಡೌನ್ ಮಾಡಿ ಘೋಷಿಸಿದರು. ಯುವಕನ ಮನೆಯಲ್ಲಿದ್ದ 6 ಜನರನ್ನು ಕ್ವಾರಂಟೈನ್ಗೆಂದು ತೋರಣಗಲ್ಲಿನ ವಿಜಯಲಕ್ಷ್ಮೀ ಲಾಡ್ಜ್ಗೆ ಕಳುಹಿಸಿ ಕೊಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








