ಚಿಕ್ಕಮಗಳೂರು :
ಮಾರ್ಗ ಬದಿಯಲ್ಲಿ ನಿಲ್ಲಿಸಿದ್ದ ಕಾರು ಚಾಲಕನಿಲ್ಲದೇ ತಾನಾಗೆ ಚಲಿಸಿದ ಘಟನೆ ಜಿಲ್ಲೆಯ ಮೂಡಿಗೆರೆ ನಗರದಲ್ಲಿ ನಡೆದಿದೆ.
ಮಾರುತಿ 800 ಕಾರಿನಲ್ಲಿ ಬಂದ ವ್ಯಕ್ತಿ, ರಸ್ತೆ ಪಕ್ಕ ಕಾರು ನಿಲ್ಲಿಸಿ ಅಂಗಡಿಗೆ ತೆರಳಿದ್ದಾನೆ. ಅದೇ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ಯುವತಿ ಕೂಡ ಕೆಲವೇ ನಿಮಿಷಗಳಲ್ಲಿ ಕಾರಿನಿಂದ ಕೆಳಗಿಳಿದಿದ್ದಾಳೆ. ಆಕೆ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ, ನಿಂತಿದ್ದ ಕಾರು ಚಾಲಕನಿಲ್ಲದೇ ತಾನಾಗೇ ಚಲಿಸಲು ಆರಂಭಿಸಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಬೈಕ್ ಚಾಲಕರೊಬ್ಬರು ತಮ್ಮ ಸಮಯ ಪ್ರಜ್ಞೆಯಿಂದ, ಏಕಾಏಕಿ ಚಲಿಸಲು ಆರಂಭಿಸಿದ ಕಾರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸಂಭವಿಸಬಹುದಾದ ಅನಾಹುತವೊಂದನ್ನು ತಪ್ಪಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಆ ವಿಡಿಯೋ ಇದೀಗ ವೈರಲ್ ಆಗಿದೆ.#Mudigere #Chikkamagaluru pic.twitter.com/vRKF4TlGv4
— oneindiakannada (@OneindiaKannada) July 11, 2020
ಎಲ್ಲರೂ ಕಾರು ತಾನಾಗೇ ಹೋಗುತ್ತಿದೆ ಎಂದು ಗಾಬರಿಗೊಳಗಾಗಿ ಅಕ್ಕಪಕ್ಕ ಸರಿಯುತ್ತಿದ್ದರು. ಅದೇ ವೇಳೆಗೆ ಕಾರಿನ ಹಿಂಭಾಗದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟಿ ಸವಾರ ಕಾರು ತಾನಾಗೇ ಹೋಗುವುದನ್ನ ಗಮನಿಸಿ ಓಡಿ ಬಂದು ಕಾರ್ ಡೋರ್ ತೆಗೆದು ಡ್ರೈವರ್ ಸೀಟಲ್ಲಿ ಕೂತು ಕಾರಿನ ಬ್ರೇಕ್ ಹಿಡಿದು ಕಂಟ್ರೋಲ್ ಮಾಡಿ ಸಂಭವಿಸಬಹುದಾದ ಭಾರೀ ಅನಾಹುತವೊಂದು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ