ಥಾಣೆ:
ಪೊಲೀಸ್ ಅಧಿಕಾರಿಯೊಂದಿಗೆ ಚೆಲ್ಲಾಟವಾಡಿದ ರೆಸ್ಟೋರೆಂಟ್ ಮಾಲೀಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.ಮಹಾರಾಷ್ಟ್ರದ ಥಾಣೆಯಲ್ಲಿರುವ ಈ ರೆಸ್ಟೊರೆಂಟ್ನಲ್ಲಿ ಲಾಕ್ಡೌನ್ ನಿಯಮ ಉಲ್ಲಂಘನೆಯಾದ ಕಾರಣಕ್ಕೆ ಪೊಲೀಸರು ಅದನ್ನು ಸೀಲ್ಡೌನ್ ಮಾಡಿದ್ದರು. ರೆಸ್ಟೋರೆಂಟ್ ಬಾಗಿಲನ್ನು ಮುಚ್ಚಿಸಿದ್ದರು. ಅದೇ ಸಿಟ್ಟಿನಲ್ಲಿದ್ದ ಮಾಲೀಕ, ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ, ಸಿಕ್ಕಿಬಿದ್ದಿದ್ದಾನೆ.
ಮಾಲೀಕನ ಹೆಸರು ದೀಪಕ್ ದಂಶನಿ. ತನ್ನ ರೆಸ್ಟೊರೆಂಟ್ನ್ನು ಪೊಲೀಸರು ಮುಚ್ಚುತ್ತಿದ್ದಂತೆ ತನ್ನ ಟ್ವಿಟರ್ ಅಕೌಂಟ್ನಲ್ಲಿ ಡಿಜಿ ಕಂಟ್ರೋಲ್ ಮತ್ತು ಥಾಣೆ ಸಿಟಿ ಪೊಲೀಸ್ ಠಾಣೆಯ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ, ಥಾಣೆ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಯೋರ್ವ ಒಂದು ರೆಸ್ಟೋರೆಂಟ್ನಲ್ಲಿ ರಾತ್ರಿ 11.30ರವರೆಗೂ ಕುಳಿತು ಮದ್ಯಪಾನ ಮಾಡುತ್ತಿದ್ದರು ಎಂದು ಟ್ವೀಟ್ ಮಾಡಿದ್ದ.
ಈ ಮೆಸೇಜ್ನ್ನು ಡಿಜಿ ಕಂಟ್ರೋಲ್ ರೂಂ ಥಾಣೆ ನಗರ ಪೊಲೀಸ್ ಠಾಣೆಗೆ ಫಾರ್ವರ್ಡ್ ಮಾಡಿ, ಸ್ಪಷ್ಟನೆ ಕೇಳಿತ್ತು. ಆ ಮೆಸೇಜ್ ನೋಡಿದ ಪೊಲೀಸ್ ಅಧಿಕಾರಿ ಶಾಕ್ಗೆ ಒಳಗಾಗಿದ್ದರು. ಕಾರಣ ದೂರಿನಲ್ಲಿ ಅವರದ್ದೇ ಹೆಸರಿತ್ತು. ನಂತರ, ನಾನು ಹೀಗೆ ರೆಸ್ಟೋರೆಂಟ್ನಲ್ಲಿ ಯಾವತ್ತು ಕುಡಿದಿಲ್ಲ. ಈ ಟ್ವಿಟರ್ನಲ್ಲಿ ನಮೂದಿಸಲಾದ ಸಮಯದಲ್ಲಿ ನಾನು ಠಾಣೆಯಲ್ಲಿ ಕರ್ತವ್ಯದಲ್ಲಿದ್ದೆ ಎಂಬುದಕ್ಕೆ ಸಾಕ್ಷಿ ಇದೆ ಎಂದು ಹೇಳಿ, ಸಂಬಂಧಪಟ್ಟ ದಾಖಲೆಗಳೊಂದಿಗೆ ಅವರು ಸ್ಪಷ್ಟನೆ ನೀಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








