ತುಮಕೂರು: ಕೊರೊನಾಗೆ ಮತ್ತೆ ನಾಲ್ವರು ಬಲಿ

ತುಮಕೂರು

    ಜಿಲ್ಲೆಯಲ್ಲಿ ಕೊರೊನಾ ಆತಂಕ ಮುಂದುವರೆದಿದೆ. ಸೋಂಕಿತರು ಹಾಗೂ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಂಗಳವಾರ ಜಿಲ್ಲೆಯ 127 ಜನರಲ್ಲಿ ಪಾಸಿಟೀವ್ ಖಚಿತವಾಗಿದೆ. ಇದರೊಂದಿಗೆ ಈವರೆಗೆ ಸೋಂಕಿತರ ಸಂಖ್ಯೆ 1473ಕ್ಕೆ ಏರಿದೆ. ಜೊತೆಗೆ, ತುಮಕೂರು ನಗರದ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ.

     ನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. 51 ವರ್ಷದ ಮಹಿಳೆ 25ರಂದು ಹಾಗೂ 68 ವರ್ಷದ ಪುರುಷ 27ರಂದು ಮೃತರಾಗಿದ್ದಾರೆ. ಇವರು ಜ್ವರದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ, ಪಾಸಿಟೀವ್ ದೃಢಪಟ್ಟಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇವರು ಮೃತಪಟ್ಟರು. ನಗರದ ಜೈಪುರದ 70 ವರ್ಷದ ಮಹಿಳೆ ಜ್ವರದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತದ್ದರು, ಇವರ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟೀವ್ ಬಂದಿತ್ತು. ಇವರು ಇದೇ 27ರಂದು ಅಸುನೀಗಿದರು.

    ಎಸ್‍ಐಟಿ ಬಡಾವಣೆಯ 63 ವರ್ಷದ ಪುರುಷರಿಗೆ ಕೋವಿಡ್ ಸೋಂಕು ಖಚಿತವಾಗಿದ್ದು, ಇವರು ಇದೇ 24ರಂದು ಸಾವಿಗೀಡಾದರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದ್ದಾರೆ.

    ಮಂಗಳವಾರ ವರದಿಯಾದ 127 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 60 ಜನರಲ್ಲಿ ಕೊರೊನ ಸೋಂಕು ಖಚಿತವಾಗಿದೆ. ಕುಣಿಗಲ್ ತಾಲ್ಲೂಕಿನಲ್ಲಿ 13, ಪಾವಗಡ ತಾಲ್ಲೂಕಿನಲ್ಲಿ 10, ತುರುವೇಕೆರೆ ತಾಲ್ಲೂಕಿನಲ್ಲಿ 9, ತಿಪಟೂರು ತಾಲ್ಲೂಕಿನಲ್ಲಿ 8, ಮಧುಗಿರಿ ತಾಲ್ಲೂಕಿನ 7, ಗುಬ್ಬಿ ತಾಲ್ಲೂಕಿನ 7, ಶಿರಾ ಹಾಗೂ ಕೊರಟಗೆರೆ ತಾಲ್ಲೂಕಿನಲ್ಲಿ ತಲಾ 6, ಚಿಕ್ಕನಾಯಕನಹಳ್ಳಿ ಒಬ್ಬರಿಗೆ ಸೋಂಕು ಕಾಣಿಸಿದೆ.

    ಇವರಲ್ಲಿ 72 ಪುರುಷರು, 55 ಮಹಿಳೆಯರು ಸೇರಿದ್ದಾರೆ. 60 ವರ್ಷ ವಯಸ್ಸಿನ ಮೇಲ್ಪಟ್ಟ 9 ಜನ ಇದ್ದಾರೆ.ಈವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 1473 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 635, ಕುಣಿಗಲ್ ತಾ. 138, ಪಾವಗಡ ತಾ. 123, ಮಧುಗಿರಿ ತಾ. 114, ಶಿರಾ 94, ಗುಬ್ಬಿ ತಾ. 79, ಕೊರಟಗೆರೆ ತಾ. 75, ಚಿಕ್ಕನಾಯಕನಹಳ್ಳಿ ತಾ. 73, ತಿಪಟೂರು ತಾ. 72, ತುರುವೇಕೆರೆ ತಾ. 70 ಪ್ರಕರಣ ವರದಿಯಾಗಿವೆ.

    ಮಂಗಳವಾರ ಗುಣಮುಖರಾಗಿ ಆಸ್ಪತ್ರೆಯಿಂದ 29 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 665 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 761 ಸಕ್ರಿಯ ಪ್ರಕರಣಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap