ಅಡ್ಡಾದಿಡ್ಡಿ ಲಾರಿ ಚಾಲನೆ : ಪ್ರಾಣಪಾಯದಿಂದ ಸೆಕ್ಯೂರಿಟಿ ಗಾರ್ಡ್ ಪಾರು

ಕೊರಟಗೆರೆ

 

    ಟೋಲ್‍ನ ಬಳಿ ಅತ್ತಿ ಅಜಾಗರೂಕತೆಯಿಂದ ಪಾನಮತ ಚಾಲಕನೊರ್ವ ವೇಗವಾಗಿ ಲಾರಿಯೊಂದು ಚಲಿಸಿ ಹಿಡತಕ್ಕೆ ಸಿಗದೆ ಡಿವೈಡರ್ ಹೊಡೆದು ಸ್ವಲ್ಪದರಲ್ಲಿ ಸಕ್ಯೂರಿಟಿ ಪ್ರಾಣಾಪಾಯದಿಂದ ಪರಾಗಿರುವುದಲ್ಲದೆ, ದೊಡ್ಡ ಅನಹುತ ಸೃಷ್ಠಿಸುವ ವತ್ತಾವರಣ ನಿರ್ಮಿಸಿ ಅತಂಕ ಮೂಡಿಸಿದ ಘಟನೆ ಶುಕ್ರವಾರ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಟೋಲ್‍ನ ಬಳಿ ಜರುಗಿದೆ .

    ಮಳವಳ್ಳಿ – ರಾಯದುರ್ಗ ಸಂಪರ್ಕ ಕಲ್ಪಸುವ ಕೆಶೀಪ್ ನಿರ್ಮಿಸಿದ ರಾಜ್ಯ ಹೆದ್ದಾರಿ ಕೊರಟಗೆರೆ –ಮದುಗಿರಿ ಮದ್ಯಬಾಗದಲ್ಲಿ ಬರುವ ತುಂಬಾಡಿ ಹೊಸ ಟೋಲ್‍ನ ಬಳಿ ಈ ಘಟನೆ ಜುರುಗಿದ್ದು, ಸಿಸಿ ಕ್ಯಾಮರದಲ್ಲಿ ಇಲ್ಲಿನ ಬಯಾನಕ ದೃಷ್ಯ ಸೆರೆಯಾಗಿದ್ದು, ಭಯ ಹುಟ್ಟಿಸುವ ಮಾದರಿಯಲ್ಲಿ ಲಾರಿಯೊಂದು ಅತಿ ವೇಗವಾಗಿ ಟೋಲ್‍ನ ಸಿಗನಲ್ ಲೆಕ್ಕಿಸದೆ ಪ್ರಯಾಣಿಸಿರುವುದಲ್ಲದೆ ಅನೇಕ ಅನಾಹುತ ಸೃಷ್ಠಿಸುವ ಅತಂಕ ಮೂಡಿಸಿರುವುದು ಟೋಲ್‍ನ ಕೆಲಸಗಾರರಿಗೆ ಭಯ ಹುಟ್ಟಸಿದೆ.

    ಶುಕ್ರವಾರ ಮದ್ಯಾಹ್ನ 4 ಗಂಟೆ ಸಮಯದಲ್ಲಿ ಕೊರಟಗೆರೆ ಮಾರ್ಗದ ಕಡೆಯಿಂದ ಮದುಗಿರಿ ಕಡೆಗೆ ಸೀಮೆಂಟ್ ಲಾರಿಯೊಂದು ಅತ್ತಿ ವೇಗವಾಗಿ ಟೋಲ್ ದಾಟುತಿರುವುದು ಜೋತೆಗೆ ಅನಹುತ ಸೃಷ್ಠಿಸುವ ಸುಳಿವು ಅರಿತ ಸಕ್ಯೋರಿಟಿ ಬಾಯ್ ಲಾರಿಯಿಂದ ತಪ್ಪಸಿಕೊಂಡು ಹೋಡಿ ಹೋಗುವ ಮೂಲಕ ಹಾಗುವ ಅನಾಹುತ ತಪ್ಪಿದಂತ್ತಾಗಿದೆ, ಸಿ ಸಿ ಕ್ಯಾಮರದಲ್ಲಿ ಈ ಘಟನೆಯ ಸಂಪೂರ್ಣ ಚಿತ್ರಣ ಸೆರೆಯಾಗಿದ್ದು, ಸಮಾಜಿಕ ಜಾಲತಾಣದಲ್ಲಿ ಹರಿದಾಡಿದೆ, ಏಂಥವರಿಗೂ ಈ ದೃಷ್ಯಾವಳಿಗಳು ಮೈ ನಡಿಗಿಸುವಂತಿದ್ದು ಈ ಘಟನೆಯಿಂದ ಯವುದೇ ಪ್ರಾಣಪಾಯವಾಗದಿರುವುದು ನಿಟ್ಟುಸಿರು ಬಿಡುವಂತ್ತಾಗಿದೆ.ಈ ಸಂಭಂದ ಕೊರಟಗೆರೆ ಪೋಲೋಸ್ ಠಾಣೆಯಲ್ಲಿ ಪ್ರಕರಣ ದಾಖಲ್ಲಾಗಿದ್ದು, ಪಾನಮತ್ತ ಲಾರಿ ಡೈವರ್‍ನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲ್ಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap