ತಿಪಟೂರು :
ತಾಲ್ಲೂಕಿನಲ್ಲಿ ಇಂದು ಆಸ್ಫೋಟಿಸಿ ಮತ್ತೆ 13 ಜನರನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಕೊರೊನಾ, ಒಟ್ಟು 100ಜನ ಕೊರೊನಾ ಸೋಂಕಿತರು ಸಕ್ರೀಯವಾಗಿದ್ದು, ಒಟ್ಟು 171 ಸೋಂಕಿತರನ್ನು ಹೊದ್ದಿದ್ದು ಜಿಲ್ಲೆಯಲ್ಲಿ 4ನೇ ಸ್ಥಾನಕ್ಕೇರುವುದರೊಂದಿಗೆ ಶುಕ್ರವಾರ ಒಬ್ಬರು ಕೊರೊನಾದಿಮದ ಸಾವಿಗೀಡಾಗಿದ್ದು ಒಟ್ಟು ಇಬ್ಬರನ್ನು ಆಹುತಿ ತೆಗೆದುಕೊಂಡಿದೆ.
ಕೊರೊನಾ ಹಾಟ್ಸ್ಪಾಟ್ ಆಗುತ್ತಿರುವ ನೊಣವಿನಕೆರೆ : ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೂ ಕೊರೊನಾ ಕಾರ್ಮೋಡ ಆವರಿಸುತ್ತಿದ್ದು ನೊಣವಿನಕೆರೆ ಒಂದರಲ್ಲೇ ಒಟ್ಟು 13 ಸೋಂಕಿತರನ್ನು ಒಳಗೊಂಡು ತಾಲ್ಲೂಕಿನ ಕೊರೊನಾ ಹಾಟ್ಸ್ಪಾಟ್ ಆಗಿದೆ. ನೊಣವಿನಕೆರೆ ಪಕ್ಕದ ಆಲ್ಬೂರು ಗ್ರಾಮದಲ್ಲಿಯೂ 5ಜನರು ಕೊರೊನಾ ಸೋಂಕಿರಿದ್ದಾರೆ ಇನ್ನುಳಿದಂತೆ ತಾಲ್ಲೂಕಿನ ಕೆಲಹಳ್ಳಿಗಳಾದ ಕುಪ್ಪಾಳು, ಹರಚನಹಳ್ಳಿ, ಗುರುಗದಹಳ್ಳಿ ಹಳ್ಳಿಗಳಲ್ಲಿ ಸೋಂಕಿತರು ಕಂಡುಬಂದಿದ್ದು ಅವರುಗಳು ವಾಸಿಸುವ ಮನೆಯ ಹತ್ತಿರ ಸಂಬಂಧಿಸಿದ ಗ್ರಾಮ ಪಂಚಾಯಿತಿಯವರು ಸೀಲ್ಡೌನ್ಮಾಡಿದ್ದಾರೆ.
ಇನ್ನೂ ನಗರದಲ್ಲಿ ಹಲವಾರು ಪ್ರಕರಣಗಳು ಕಂಡುಬಂದಿದ್ದು ಎಲ್ಲಾ ಕಡೆಯೂ ಸ್ಯಾನಿಟೀಷನ್ಮಾಡಿ ಸೀಲ್ಡೌನ್ ಮಾಡಲಾಗಿದೆ. ಈಗಲಾದರೂ ಸಾರ್ವಜನಿಕರು ತಮ್ಮ ಆರೋಗ್ಯ ತಮ್ಮದೇ ಎಂದು ತಿಳಿದು ಸರ್ಕಾರದ ಕೋವಿಡ್ ಆದೇಶಗಳನ್ನು ಪಾಲಿಸುತ್ತಾ ಜಾಗರೂಕರಾಗಿರದಿದ್ದರೆ ಅಪಾಯದ ಮಟ್ಟ ಮತ್ತಷ್ಟು ಬಿಗಡಾಯಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ